ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯ ಕಚೇರಿ ಸಭಾಂಗಣದಲ್ಲಿ ಬುಧವಾರ ಬೆಳಗಾವಿ ಉತ್ತರ ವಲಯ ಮಟ್ಟದ ಕರ್ತವ್ಯ ಕೂಟ-2026ರಲ್ಲಿ ಅತ್ಯೂತ್ತಮ ಸಾಧನೆ ತಂಡವನ್ನು ಆಯುಕ್ತ ಭೂಷಣ ಬೋರಸೆ ಅಭಿನಂದಿಸಿದರು. 
ಬೆಳಗಾವಿ

ಅತ್ಯುತ್ತಮ ಪ್ರದರ್ಶನ ನೀಡಿದ ಬೆಳಗಾವಿ ಪೊಲೀಸ್ ತಂಡ

ಬೆಳಗಾವಿ: ಕರ್ತವ್ಯಕ್ಕೆ ಶಿಸ್ತು, ಕಾರ್ಯಕ್ಕೆ ನೈಪುಣ್ಯ ಹಾಗೂ ಸೇವೆಗೆ ಸಮರ್ಪಣೆ ಈ ಮೂರು ಗುಣಗಳೊಂದಿಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯ ತಂಡವು 8ನೇ ಬೆಳಗಾವಿ ಉತ್ತರ ವಲಯ ಮಟ್ಟದ ಕರ್ತವ್ಯ ಕೂಟ-2026ರಲ್ಲಿ ಅತ್ಯೂತ್ತಮ ಸಾಧನೆ ಮಾಡಿದೆ.
ವಿವಿಧ ತಾಂತ್ರಿಕ, ವೈಜ್ಞಾನಿಕ ಹಾಗೂ ವಿಶೇಷ ಪೊಲೀಸ್ ಕೌಶಲ್ಯಗಳ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬೆಳಗಾವಿ ನಗರ ಪೊಲೀಸ ತಂಡವು ಒಟ್ಟು 13 ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. ಇದರಲ್ಲಿ 11 ಪದಕಗಳು ಹಾಗೂ 2 ಟ್ರೋಫಿಗಳ ಮೂಲಕ ಸಮಗ್ರ ಸಾಧನೆಯ ಆಧಾರದ ಮೇಲೆ ವಲಯ ಮಟ್ಟದಲ್ಲಿ ಸರ್ವೋತ್ತಮ ದ್ವಿತೀಯ ಸ್ಥಾನ ಪಡೆದಿದೆ.
ಪಿಐ ಮಂಜುನಾಥ ಬಡಿಗೇರ ಮೆಡಿಕೋ ಲೀಗಲ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ , ಪಿಎಸ್‌ಐ ಸಂತೋಷ ದಳವಾಯಿ ಮೂರು ವಿಭಾಗಗಳಲ್ಲಿ ದ್ವಿತೀಯ, ಪಿಎಸ್‌ಐ ಸರದಾರಗೌಡ ಮುತತತ್ತಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಡಾಗ್ ಸ್ಕ್ವಾಡ ವಿಭಾಗದಲ್ಲಿ ಎಪಿಸಿ ರುದ್ರಯ್ಯ ಮಾವಿನಕಟ್ಟಿಮಠ (116) ಕ್ರೈಂ ಟ್ರ್ಯಾಕರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಡಾಗ್ ಸ್ಕ್ವಾಡ್‌ನ ಓವರ್‌ಆಲ್ ಚಾಂಪಿಯನ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪೊಲೀಸ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿ ಟೆಸ್ಟ್‌ನಲ್ಲಿ ಎಆರ್‌ಎಸ್‌ಐ ಎಸ್.ಎಂ. ಗಡಕರಿ ಪ್ರಥಮ ಸ್ಥಾನ ಪಡೆದರೆ, ಎಸಿಪಿ ರಾಕೇಶ ತಳವಾರ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಗ್ರೌಂಡ ಸರ್ಚ್ ಸ್ಪರ್ಧೆಯಲ್ಲಿ ಎಎಚ್‌ಪಿ ಅಜಿತ್ ಪಾಟೀಲ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಒಟ್ಟಿನಲ್ಲಿ 13 ಬಹುಮಾನಗಳನ್ನು ಪಡೆದು ವಲಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯದ ತಂಡದ ಸಾಧನೆಗೆ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ. ಅಲ್ಲದೆ,