ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಶೋಕ ಚಂದರಗಿ, ಮಹಾದೇವ ತಳವಾರ, ಬಲರಾಮ ಮಾಸೇನಟ್ಟಿ ಇತರರಿದ್ದರು.
ಬೆಳಗಾವಿ: ಕರ್ನಾಟಕ ಪರ ನಿರ್ಣಯ ಅಂಗೀಕರಿಸಬೇಕೆಂಬ ಬೇಡಿಕೆಗಳನ್ನೊಳಗೊಂಡ ಹಕ್ಕೊತ್ತಾಯ ಸಂಬಂಧ ಹೋರಾಟ ಮುಂದುವರಿಸಲು ಹಾಗೂ ಏಪ್ರಿಲ್ 2ನೇ ವಾರ ಮುಖ್ಯಮಂತ್ರಿ, ಗಡಿ ಉಸ್ತುವಾರಿ ಸಚಿವ, ಮುಖ್ಯ ಕಾರ್ಯದರ್ಶಿ ಭೇಟಿಗೆ ಕನ್ನಡ ಸಂಘಟನೆಗಳ ನಿಯೋಗವನ್ನು ಬೆಂಗಳೂರಿಗೆ ಕರೆದೊಯ್ಯುವ ಕುರಿತು ಸೋಮವಾರ ಪ್ರವಾಸಿ ಮಂದಿರದಲ್ಲಿ ಕನ್ನಡಪರ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ನಿರ್ಧರಿಸಲಾಯಿತು. ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ, ಗಡಿವಿವಾದ ಸಂಬಂಧ ಮಹಾಜನ ವರದಿಯೇ ಅಂತಿಮ ಹಾಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಪಾಲಿಕೆಯಲ್ಲಿ ಅಂಗೀಕರಿಸಲು ಪಾಲಿಕೆಗೆ ಮನವಿ ಸಲ್ಲಿಸಲಾಗುವುದು ಎಂದರು.
ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ನೀಡಲಾಗಿದ್ದ 50 ಲಕ್ಷ ರೂ. ಅನುದಾನದ ದುರ್ಬಳಕೆ ಬಗ್ಗೆ ಈಗಾಗಲೇ ದೂರು ನೀಡಿದ್ದು, ಈ ಬಗ್ಗೆ ಚರ್ಚೆ ನಡೆದಿದೆ. ಈ ಸಂಬಂಧ ಬೆಂಗಳೂರಿಗೆ ನಿಯೋಗ ಹೋದ ಸಂದರ್ಭದಲ್ಲಿ ಪ್ರಸ್ತಾಪಿಸಲಾಗುವುದು ಎಂದರು. ಮಹಾದೇವ ತಳವಾರ, ಬಲರಾಮ ಮಾಸೇನಟ್ಟಿ, ವಾಜೀದ ಹಿರೇಕೋಡಿ, ಶ್ರೀನಿವಾಸ ತಾಳೂಕರ, ಬಾಳಪ್ಪ ಗುಡಗೇನಟ್ಟಿ, ಸಣ್ಣತಮ್ಮ ಮೂಕನವರ, ನಾಗೇಶ ಕೊಪ್ಪದ, ಮಲ್ಲಪ್ಪ ಗುಡಗೇನಟ್ಟಿ, ದಯಾನಂದ ಪವಾರ, ಈಶ್ವರಗೌಡ ಪಾಟೀಲ, ಸತೀಶ ನಾಯಕ, ಫರೀದಾ ನದ್ಾ, ರಾಣಿ ಬೀಟಿ, ಸಂಗೀತಾ ಕಾಂಬಳೆ ಇತರರಿದ್ದರು.