ಬೆಳಗಾವಿ ಮಹಾನಗರ ಪಾಲಿಕೆಯ ತುರಮುರಿ ತ್ಯಾಜ್ಯ ಘಟಕದಲ್ಲಿ ಪ್ಲಾಸ್ಟಿಕ್ ಸಂಸ್ಕರಿಸಿ ಪ್ರತ್ಯೇಕವಾಗಿ ಸಂಗ್ರಹಿಸಲಾಗಿದೆ. 
ಬೆಳಗಾವಿ

ಪ್ಲಾಸ್ಟಿಕ್ ರಾಶಿಯಲ್ಲಿ ಮುಳಗಿದ ಬೆಳಗಾವಿ!

ಬೆಳಗಾವಿ:ನಗರ, ಗ್ರಾಮೀಣ ಜನವಸತಿ ಪ್ರದೇಶಗಳ ಅಭಿವೃದ್ಧಿ ವೇಗೆ ಹೆಚ್ಚಿದಂತೆ ಇತ್ತ ದಿನದಿಂದಿ ದಿನಕ್ಕೆ ಪರಿಸರ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲಾಗಿ ಪರಿಣಮಿಸಿದೆ!
ಹೌದು. ಬೆಳಗಾವಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ 500 ಗ್ರಾಪಂಗಳಲ್ಲಿ ಪ್ರತಿದಿನ ಅಂದಾಜು 650 ಟನ್ ಘನತ್ಯಾಜ್ಯ ಸಂಗ್ರವಾಗುತ್ತಿದ್ದು, ಅದರಲ್ಲಿರುವ 50 ರಿಂದ 60 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮರುಬಳಕೆಗೆ ಯೋಗ್ಯವಾದ ಪ್ಲಾಸ್ಟಿಕ್ ಬೇರ್ಪಡಿಸಿದ ಬಳಿಕ ಉಳಿಯುವ ತ್ಯಾಜ್ಯವನ್ನು ಸಂಸ್ಕರಿಸಿ ಸಿಮೆಂಟ್ ಇತರೆ ಕೈಗಾರಿಕೆಗಳಿಗೆ ಕಳುಹಿಸಲಾಗುತ್ತಿದೆ.ಇದಕ್ಕಾಗಿ ಸರ್ಕಾರವು ವಾರ್ಷಿಕ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ.
ಬೆಳಗಾವಿ ಮಹಾನಗರ ಪಾಲಿಕೆಯೊಂದರಲ್ಲಿ ಪ್ರತಿ ದಿನ ಒಣ,ಹಸಿ, ಪ್ಲಾಸ್ಟಿಕ್ ಸೇರಿ 320 ಟನ್ ತ್ಯಾಜ್ಯಾ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಪತ್ತೆಯಾಗುವ 25 ರಿಂದ 30 ಟನ್ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಡಲು ಪರದಾಡುತ್ತಿರುವ ಪಾಲಿಕೆ ಈ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗಾಗಿಯೇ ಪ್ರತ್ಯೇಕ ಸಿಬ್ಬಂದಿ, ಯಂತ್ರೋಪಕರಣ ಬಳಕೆ ಮಾಡುತ್ತಿದೆ. ಆದರೂ, ಪ್ಲಾಸ್ಟಿಕ್ ನಿಯಂತ್ರಣಕೆಕ ಬರುತ್ತಿಲ್ಲ. ಶೇ.20ರಷ್ಟು ಪ್ಲಾಸ್ಟಿಕ್ ಮರುಸಂಸ್ಕರಣೆ ಒಳಪಡದ ಪ್ಲಾಸ್ಟಿಕ್ ಕಸ ಚರಂಡಿ, ಗಟಾರ ಮತ್ತು ಖಾಲಿ ಪ್ರದೇಶಗಳಲ್ಲಿ ಬಿದ್ದು ಮಳೆಗಾಲದಲ್ಲಿ ನೀರಿನ ಹರಿವಿಗೆ ಅಡ್ಡಿಯಾಗುತ್ತಿದೆ.
ಗೋಕಾಕ, ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ, ಚಿಕ್ಕೋಡಿ, ಅಥಣಿ, ರಾಯಬಾಗ, ರಾಮದುರ್ಗ ತಾಲೂಕಿನ ನಗರಸಭೆ, ಪುರಸಭೆಗಳಲ್ಲಿ ನಿತ್ಯ 15 ರಿಂದ 20 ಟನ್ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಪ್ರತ್ಯೇಕಿಸಿ ವಿಲೇವಾರಿ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಕೆಲವೊಮ್ಮ ಹಸಿ ತ್ಯಾಜ್ಯದ ಜತೆಗೆ ಮಿಶ್ರಣವಾಗಿ ಗೊಬ್ಬರ ರೂಪದಲ್ಲಿ ಭೂಮಿ ಸೇರ್ಪಡೆಯಾಗುತ್ತಿದೆ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಜಾಗೃತಿ ಅಭಿಯಾನ, ದಾಳಿ ಹಾಗೂ ದಂಡದಂತಹ ಕ್ರಮಗಳನ್ನು ಕೈಗೊಂಡಿದ್ದರೂ, ಏಕಬಳಕೆ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುತ್ತಿಲ್ಲ.ದಿನದಿಂದ ದಿನಕ್ಕೆ ಬಳಕೆ ಪ್ರಮಾಣ ಹೆಚ್ಚಾಗುತ್ತಿದೆ. ಕೆಲವು ಕಡೆ ಪ್ಲಾಸ್ಟಿಕ್ ಉತ್ಪಾದಿಸುವಕೈಗಾರಿಕೆಗಳಿಗೆ ನೋಟೀಸ್ ನೀಡಿದರು ಪ್ರಯೋಜನವಾಗುತ್ತಿಲ್ಲ ಎಂದು ನಗರ ಸ್ಥಳೀಯ ಸಂಸ್ಥೆಯ ಪರಿಸರ ವಿಭಾಗ ಇಂಜಿನಿಯರ್‌ಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
................
ಬಾಕ್ಸ್
ವಾರ್ಷಿಕ 16 ಸಾವಿರ ಟನ್ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ
ಬೆಳಗಾವಿ ಮಹಾನಗರ ಪಾಲಿಕೆ, 38 ನಗರ ಸ್ಥಳೀಯ ಸಂಸ್ಥೆಗಳು, 500 ಗ್ರಾಪಂ ವ್ಯಾಪ್ತಿಯಲ್ಲಿ ವಾರ್ಷಿಕ 16 ಸಾವಿರ ಟನ್ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯಾಗುತ್ತಿದೆ. ಅಷ್ಟೇ ಅಲ್ಲದೆ, ರಸ್ತೆ ಬದಿಯಲ್ಲಿ ಹಾರಾಡುವ ಕ್ಯಾರಿ ಬ್ಯಾಗ್‌ಗಳು, ಚರಂಡಿಗಳಲ್ಲಿ ತೇಲುವ ಪ್ಲಾಸ್ಟಿಕ್ ಬಾಟಲಿಗಳು, ಖಾಲಿ ಜಾಗಗಳಲ್ಲಿ ರಾಶಿಯಾಗಿ ಬೀಳುತ್ತಿರುವ ನೂರಾರು ಟನ್ ಪ್ಲಾಸ್ಟಿಕ್ ಜನವಸತಿ ಪ್ರದೇಶಗಳ ಅಂದವನ್ನಷ್ಟೇ ಅಲ್ಲ, ಪರಿಸರ ಮತ್ತು ಸಾರ್ವಜನಿಕ ಆರೋಗ್ಯಕ್ಕೂ ದೊಡ್ಡ ಬೆದರಿಕೆಯಾಗಿವೆ.
......................
ಬಾಕ್ಸ್
ಜಲ್ಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಹಿತಿ
ವಾರ್ಷಿಕ ಪ್ಲಾಸ್ಟಿಕ್ ವಿಲೇವಾರಿ -16 ಸಾವಿರ ಟನ್
ಪ್ರತಿದಿನ ಘನತ್ಯಾಜ್ಯ ಸಂಗ್ರಹ : 650ಟನ್
ಪ್ರತಿದಿನ ಪ್ಲಾಸ್ಟಿಕ ತ್ಯಾಜ್ಯ : 60 ಟನ್
ವಾರ್ಷಿಕ ಕಾರ್ಖಾನೆಗಳಿಗೆ ಪೂರೈಕೆ : 8 ಸಾವಿರ ಟನ್
ವಾರ್ಷಿಕ ವಿಲೇವಾರಿ ವೆಚ್ಚ - 25 ರಿಂದ 30 ಕೋಟಿ ರೂ.
.........................
ಕೋಟ್ಸ್
ಪ್ಲಾಸ್ಟಿಕ್ ಮುಕ್ತ ಬೆಳಗಾವಿ ಮಹಾನಗರ ಸೇರಿ ಜಿಲ್ಲೆ ಮಾಡಲು ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿರ್ಬಂಧಿಸಲು ನಿರ್ದೇಶನ ನೀಡಲಾಗಿದೆ. ಮರುಬಳಕೆಯಾಗದಿರುವ, ಪರಿಸರಕ್ಕೆ ಹಾನಿ ಉಂಟು ಮಾಡುತ್ತಿರುವ ಎಲ್ಲ ತರಹದ ಪ್ಲಾಸ್ಟಿಕ್ ಬಳಕೆಗೆ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದೇನೆ. ಸಾರ್ವಜನಿಕರು ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಕೈ ಜೋಡಿಸಬೇಕು.
- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ
...........
ಕೋಟ್ಸ್
ಈಗಾಗೇ ಹಳ್ಳಿಗಳಲ್ಲಿ ನಿತ್ಯ ಉತ್ಪಾದನೆಯಾಗುವ ಹಸಿ, ಒಣ ಹಾಗೂ ಪ್ಲಾಸ್ಟಿಕ ತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿಗಾಗಿ 500 ಗ್ರಾಪಂ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಿದ್ದು, ಇದಕ್ಕಾಗಿ ಪ್ರತ್ಯೇಕ, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ಲಾಸ್ಟಿಕ್ ಬಳಕೆ, ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ.
-ರಾಹುಲ ಶಿಂಧೆ, ಜಿಪಂ ಸಿಇಒ
............