ಯಕ್ಸಂಬಾದ ಬೀರೇಶ್ವರ ಸೊಸೈಟಿಯ ಚಿಕ್ಕೋಡಿ ಶಾಖೆಯ ನೂತನ ಕಟ್ಟಡವನ್ನು ಜ್ಯೋತಿಪ್ರಸಾದ ಜೊಲ್ಲೆ ಉದ್ಘಾಟಿಸಿದರು. ಅಪ್ಪಾಸಾಹೇಬ ಜೊಲ್ಲೆ, ಶ್ರೀಪಾದ ನೇರ್ಲಿ, ಶ್ರೀನಿವಾಸ ಕರಾಳೆ ಇತರರಿದ್ದರು.
ಚಿಕ್ಕೋಡಿ: ಅಂತಾರಾಜ್ಯ ಸಹಕಾರ ಸಂಸ್ಥೆ ಯಕ್ಸಂಬಾದ ಬೀರೇಶ್ವರ ಸೊಸೈಟಿಯ ಚಿಕ್ಕೋಡಿಯ ಎರಡನೇ ಶಾಖೆಯ ಸ್ಥಳಾಂತರ ಪೂಜೆಯನ್ನು ಸಂಸ್ಥೆಯ ರೂವಾರಿ ಜ್ಯೋತಿಪ್ರಸಾದ ಜೊಲ್ಲೆ ಈಚೆಗೆ ನೆರವೇರಿಸಿದರು.
ಸೊಸೈಟಿ ಕಚೇರಿಯನ್ನು ಸೋಮವಾರ ಪೇಠದಿಂದ ಕೇಶವಕಲಾ ಭವನದಳ ಬಳಿ ಸ್ಥಳಾಂತರಿಸಲಾಯಿತು. ಸಹಕಾರಿಯ ಮುಖ್ಯ ಕಚೇರಿ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ ಮಾತನಾಡಿ, ಚಿಕ್ಕೋಡಿ ಶಾಖೆಯು 23.27 ಕೋಟಿ ಠೇವು ಸಂಗ್ರಹಿಸಿ 7.87 ಕೋಟಿ ಸಾಲ ವಿತರಿಸಿ ಪ್ರಗತಿಪಥದಲ್ಲಿ ಮುನ್ನಡೆದಿದೆ. ಒಂದೇ ವೇದಿಕೆಯಲ್ಲಿ ಗ್ರಾಹಕರಿಗೆ ವಿವಿಧ ಸೇವೆಗಳನ್ನು ಒದಗಿಸುತ್ತಿದೆ ಎಂದರು.
ಮುಖ್ಯ ಸಂಚಾಲಕರಾದ ಶ್ರೀಪಾದ ನೇಲೇಕರ, ಶ್ರೀನಿವಾಸ ಕರಾಳೆ, ಪ್ರಧಾನ ವ್ಯವಸ್ಥಾಪಕ ಬಿ.ಎ.ಗುರವ, ಎಸ್.ಕೆ.ಮಾನೆ, ಮುರಿಗೆಪ್ಪ ಅಡಿಸೇರ, ಪ್ರಭಾಕರ ಡಬ್ಬನವರ, ಶ್ರೀನಿವಾಸ ಜಹಾಗೀರದಾರ್, ರಮೇಶ ಗೋಪಾಲಗೋಳ, ಚಂದ್ರಕಾಂತ ನಾಯಕ, ಪ್ರಸಾದ ಕುಪ್ಪನ್ನವರ, ಇತರರಿದ್ದರು.