ಗೋವಾ ರಾಜ್ಯದ ಡಿಚೋಲಿಯಲ್ಲಿ ಯಕ್ಸಂಬಾದ ಬೀರೇಶ್ವರ ಸಹಕಾರ ಸಂಸ್ಥೆಯ ೨೩೧ನೇ ಶಾಖೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ದಾಮುಜಿ ನಾಯಿಕ ಉದ್ಘಾಟಿಸಿದರು. ದೀಪಾ ಪಾಳ, ರಂಜನಾ ವೈಗಂಕರ, ಬಹದ್ದೂರ ಗುರವ ಇತರರಿದ್ದರು.
- ಗೋವಾದ ದಾಮುಜಿ ನಾಯಿಕ ಆಶಯ
- ೨೩೧ನೇ ಶಾಖೆ ಉದ್ಘಾಟನೆ
ಚಿಕ್ಕೋಡಿ: ಬೀರೇಶ್ವರ ಸಂಸ್ಥೆ ವಿಶ್ವಾಸಾರ್ಹವಾಗಿದ್ದು, ಒಂದೇ ಸೂರಿನಡಿ ಎಲ್ಲ ಸೇವೆಗಳನ್ನು ಒದಗಿಸುತ್ತಿದೆ. ಇದರಿಂದ ಗೋವಾ ರಾಜ್ಯದ ಜನರ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ದಾಮುಜಿ ನಾಯಿಕ ಹೇಳಿದರು.
ಗೋವಾದ ಡಿಚೋಲಿಯಲ್ಲಿ ಯಕ್ಸಂಬಾದ ಜೊಲ್ಲೆ ಗ್ರೂಪ್‌ನ ಅಂಗಸಂಸ್ಥೆಯಾದ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ೨೩೧ನೇ ಶಾಖೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ಶಾಖೆ ಪ್ರಗತಿಗೆ ಕೈಜೋಡಿಸಬೇಕು ಎಂದರು.
ಬೀರೇಶ್ವರ ಸೊಸೈಟಿ ಪ್ರಭಾರ ಪ್ರಧಾನ ವ್ಯವಸ್ಥಾಪಕ ಬಹದ್ದೂರ ಗುರವ ಮಾತನಾಡಿ, ದಾಮುಜಿ ನಾಯಿಕ ಜೊಲ್ಲೆ ಗ್ರೂಪ್‌ನೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಕಳೆದ ವರ್ಷ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಶಾಖೆ ಉದ್ಘಾಟಿಸಿ ಅದರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.
ಗೋವಾ ನಗರಸಭೆ ಉಪಾಧ್ಯಕ್ಷ ದೀಪಾ ಪಾಳ, ರಂಜನಾ ವೈಗಂಕರ, ತನುಜ ಗಾಂಕರ, ದೀಪಾ ಶಿರಗಾಂವ್ಕರ, ಚಂದ್ರಕಾಂತ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತು ಗೋವಾ ಘಟಕ ಅಧ್ಯಕ್ಷ ಸಿದ್ದಣ್ಣ ಮೇಟಿ, ಬಹದ್ದೂರ ಗುರವ, ರಮೇಶ ಕುಂಬಾರ, ಸಹಾಯಕ ಪ್ರಧಾನ ವ್ಯವಸ್ಥಾಪಕ ಶೇಖರ ಪಾಟೀಲ ಇತರರಿದ್ದರು.
೩೫ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸೇರಿ ೨೩೦ ಶಾಖೆಗಳನ್ನು ಹೊಂದಿದೆ. ಅಕ್ಟೋಬರ್ ೩೦ರ ವರೆಗೆ ೪,೫೮೮ ಕೋಟಿ ರೂ. ಠೇವಣಿ ಇದ್ದು, ೩,೬೧೦ ಕೋಟಿ ರೂ. ಸಾಲ ನೀಡಿದೆ. ೪.೨೭ ಲಕ್ಷ ರೂ. ಹೆಚ್ಚು ಸದಸ್ಯರಿರುವ ಸೊಸೈಟಿ ದಕ್ಷಿಣ ಭಾರತದ ಅತಿ ದೊಡ್ಡ ಬಹುರಾಜ್ಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.