ಘಟನಟ್ಟಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಬಾಬು ಗಲಗಲಿ, ಸಚಿನ ದೇಸಾಯಿ, ಉಮೇಶ ಅವಟಿ ಇತರರಿದ್ದರು. 
ಬೆಳಗಾವಿ

ಸಾಮಾಜಿಕ ಕಳಕಳಿ ಹೊಂದಲಿ

ವಿದ್ಯಾ ಶೆಟ್ಟನಗೌಡ್ರ
ಅಥಣಿ ಗ್ರಾಮೀಣ: ವಿದ್ಯಾರ್ಥಿಗಳು ಶಿಕ್ಷಣದೊಟ್ಟಿಗೆ ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಕಳಕಳಿ ರೂಢಿಸಿಕೊಳ್ಳಬೇಕು ಎಂದು ಪಿಕೆಪಿಎಸ್ ಅಧ್ಯಕ್ಷ ಬಾಬು ಗಲಗಲಿ ಹೇಳಿದರು.
ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ನಿಮಿತ್ತ ರೋಟರಿ ಕ್ಲಬ್ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮನುಷ್ಯ ಸ್ವಾರ್ಥಕ್ಕಾಗಿ ಸುತ್ತಲಿನ ಪರಿಸರ ಮತ್ತು ಜೀವ ಸಂಕುಲ ನಾಶ ಮಾಡುತ್ತಿದ್ದಾನೆ. ಹೀಗಾಗಿ ಶಿಕ್ಷಕರು ಮಕ್ಕಳಿಗೆ ಪರಿಸರದ ಬಗ್ಗೆ ಬೋಽಸಬೇಕು. ಪ್ಲಾಸ್ಟಿಕ್ ಬಳಕೆ, ಮಾದಕ ವಸ್ತುಗಳ ನಿಷೇಧಕ್ಕೆ ವಿದ್ಯಾರ್ಥಿಗಳು ಧ್ವನಿ ಎತ್ತಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಸಚಿನ ದೇಸಾಯಿ ಮಾತನಾಡಿ, ಪರಿಸರ ಸಂರಕ್ಷಿಸಲು ಹೃದಯವಂತಿಕೆ ಬೇಕು ಎಂದು ಹೇಳಿದರು.
ವಕೀಲ ಉಮೇಶ ಅವಟಿ ಮಾತನಾಡಿ, ಸಾಲುಮರದ ತಿಮಕ್ಕ ಅವರ ಆದರ್ಶ ಪಾಲಿಸಬೇಕು ಎಂದರು.
ಸಾಲುಮರದ ತಿಮಕ್ಕ ಹಾಗೂ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಶಾಲಾ ಆವರಣದಲ್ಲಿ ೭೫ ಸಸಿಗಳನ್ನು ನಡೆಲಾಯಿತು. ಗ್ರಾಪಂ ಅಧ್ಯಕ್ಷ ಶ್ರೀಶೈಲ ಕಾಂಬಳೆ, ಮುಖಂಡರಾದ ಶೇಖರ ಕೋಲಾರ, ಆನಂದ ಗಲಗಲಿ, ಯಲ್ಲಪ್ಪ ಕಲಾಲ, ಸಿ.ಎಸ್.ಕೋಲಾರ, ಮುಖ್ಯಶಿಕ್ಷಕ ಬಿ.ಎಸ್.ಸಿಂಧೂರ, ಸಿ.ಎಸ್.ಕೋಟ್ಯಾಳ, ನಾರಾಯಣ ಕದಂ, ಶ್ರೀಮಂತ ಬಸರಿಕೋಡಿ, ಕುಮಾರ ಗಲಗಲಿ, ಎಂ.ಜಿ.ಇಟ್ನಾಳಮಠ, ಗಣಪತಿ ಗಲಗಲಿ, ಶ್ರೀಕಾಂತ ಅಥಣಿ, ಶಂಕರ ಗಸ್ತಿ, ಬಸವರಾಜ ಗಲಗಲಿ ಇತರರಿದ್ದರು.