ಬೆಳಗಾವಿ ನಗರದ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕನ್ನಡ ಬಳಗದ ವತಿಯಿಂದ ಈಚೆಗೆ ಸಿರಿಗನ್ನಡ ಸಂಭ್ರಮ ಜರುಗಿತು. ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮಣಿ, ಡಾ.ಎಂ.ಎಸ್.ಪಾಟೀಲ, ಡಿ.ಎ.ಕುಲಕರ್ಣಿ, ಆರ್.ಎಸ್. ಪಾಟೀಲ, ಅರುಣ ಕುಲಕರ್ಣಿ, ಶ್ವೇತಾ ಗೌಡರ ಇತರರಿದ್ದರು. 
ಬೆಳಗಾವಿ

ಕನ್ನಡದ ಬಗ್ಗೆ ಹೆಮ್ಮೆ ಇರಲಿ

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕಿ ವಿನಯಾ ದೇಶಪಾಂಡೆ ಅಭಿಪ್ರಾಯ
  • ಜಿಐಟಿಯಲ್ಲಿ ಸಿರಿಗನ್ನಡ ಸಂಭ್ರಮ
ಬೆಳಗಾವಿ: ಕನ್ನಡ ಶ್ರೀಮಂತ ಭಾಷೆಯಾಗಿದೆ. ಕನ್ನಡ ನಾಡು, ನುಡಿ ಬಗ್ಗೆ ಪ್ರತಿಯೊಬ್ಬರಲ್ಲಿ ಹೆಮ್ಮೆ ಇರಬೇಕು. ಕನ್ನಡ ಭಾಷೆ ಬೆಳವಣಿಗೆಗಾಗಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಜಿಐಟಿ ಕಾಲೇಜಿನ ಕನ್ನಡ ಬಳಗದ ಅಧ್ಯಕ್ಷೆ ಪ್ರಾಧ್ಯಾಪಕಿ ವಿನಯಾ ದೇಶಪಾಂಡೆ ಅಭಿಪ್ರಾಯಪಟ್ಟರು.
ನಗರದ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕನ್ನಡ ಬಳಗದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಸಿರಿಗನ್ನಡ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕನ್ನಡದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು. ಈ ಮೂಲಕ ನಾಡು, ನುಡಿ, ಕಲೆ, ಸಂಸ್ಕೃತಿ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನಿ ಅವರಿಂದ ನಗೆಹಬ್ಬ ಕಾರ್ಯಕ್ರಮ ಜರುಗಿತು. ಪ್ರಾಚಾರ್ಯ ಡಾ.ಎಂ.ಎಸ್. ಪಾಟೀಲ, ಡಿ.ಎ.ಕುಲಕರ್ಣಿ, ಆರ್.ಎಸ್.ಪಾಟೀಲ, ವಿವೇಕ ಕುಲಕರ್ಣಿ, ಅರುಣ ಕುಲಕರ್ಣಿ, ಶ್ವೇತಾ ಗೌಡರ ಇತರರಿದ್ದರು.