ರಾಯಬಾಗ ಪಟ್ಟಣದ ಎಸ್‌ಪಿಎಂ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನಕ್ಕೆ ಅಮರಸಿಂಹ ಪಾಟೀಲ ಚಾಲನೆ ನೀಡಿದರು. ಅರವಿಂದ ಹಗೆದ, ಶಶಿಕಲಾ ಸಿಂಗಾಡಿ, ಸವಿತಾ ಕುರಬೇಟಿ, ಪಿ.ಎ.ಮಾಳಿ ಇತರರಿದ್ದರು. 
ಬೆಳಗಾವಿ

ಕಾನೂನು ತಿಳಿವಳಿಕೆ ಇರಲಿ

ವಿದ್ಯಾ ಶೆಟ್ಟನಗೌಡ್ರ
ರಾಯಬಾಗ: ಇಂದಿನ ತಂತ್ರಜ್ಞಾನ ಕಾಲದಲ್ಲಿ ಪ್ರತಿಯೊಬ್ಬರು ಕಾನೂನು ಜ್ಞಾನ ಹೊಂದುವುದು ಅಗತ್ಯ ಎಂದು ಹೈಕೋರ್ಟ್ ವಕೀಲ ಅರವಿಂದ ಹಗೆದ ಹೇಳಿದರು.
ಎಸ್‌ಪಿಎಂ ಕಾನೂನು ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕಾನೂನು ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ ಎಂದರು.
ಮಾಜಿ ಸಂಸದ ಅಮರಸಿಂಹ ಪಾಟೀಲ, ಕಾರ್ಯದರ್ಶಿ ಶಶಿಕಲಾ ಶಿಂಗಾಡಿ, ಪ್ರಾಚಾರ್ಯ ಪ್ರೊ.ಸವಿತಾ ಕುರಬೇಟಿ, ಪಿ.ಆರ್.ಸವದತ್ತಿ, ಎಸ್.ಎಂ.ಲೈನದಾರ, ಜಿ.ಎಸ್.ಪೋಳ, ಎಂ.ಎ.ಹAಜಿ, ಎಸ್.ಟಿ.ಶೆಟ್ಟಿ, ಪಿ.ಎ.ಮಾಳಿ, ಸಿ.ಎಚ್.ನಾಯಿಕ, ಎ.ಆರ್.ಮಾಂಗ, ಐ.ಆರ್.ಪತ್ತಾರ, ಎಂ.ಆರ್.ಕಠಾರಿ, ಎಂ.ಆರ್.ಉಪ್ಪಾರ, ಎನ್.ಕೆ.ಕಾಂಬಳೆ ಹಾಗೂ ವಿದ್ಯಾರ್ಥಿಗಳು ಇದ್ದರು.