ಬೋರಗಾಂವ ಪಟ್ಟಣದ ಆರ್.ಎ.ಪಾಟೀಲ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮತ್ತು ಕಲಾ ಪ್ರದರ್ಶನಕ್ಕೆ ಉತ್ತಮ ಪಾಟೀಲ ಚಾಲನೆ ನೀಡಿದರು. ಬಿ.ಎ.ಪೂಜಾರಿ, ಮೀನಾಕ್ಷಿ ಪಾಟೀಲ, ವಿನಯಶ್ರೀ ಪಾಟೀಲ ಇತರರಿದ್ದರು.
- ಸಿಇಒ ಬಿ.ಎ.ಪೂಜಾರಿ ಹೇಳಿಕೆ
- ವಿಜ್ಞಾನ, ಕಲಾ ಪ್ರದರ್ಶನ
ಬೋರಗಾಂವ: ಶಿಕ್ಷಣ ಕ್ಷೇತ್ರಕ್ಕೆ ಆಧುನಿಕ ತಂತ್ರಜ್ಞಾನ ಸೇರಿಸುವ ಮೂಲಕ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನ ಬಳಸಲು ಆರ್.ಎ.ಪಾಟೀಲ ಪಬ್ಲಿಕ್ ಶಾಲೆ ವಿವಿಧ ಉಪಕ್ರಮ ಕೈಗೊಳ್ಳುತ್ತಿದೆ ಎಂದು ದುರದುಂಡೇಶ್ವರ ಶಿಕ್ಷಣ ಸಂಸ್ಥೆ ಸಿಇಒ ಬಿ.ಎ.ಪೂಜಾರಿ ಹೇಳಿದರು.
ಪಟ್ಟಣದ ಆರ್.ಎ.ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಜ್ಞಾನ ಮತ್ತು ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ದಿ.ರಾವಸಾಹೇಬ ಪಾಟೀಲ ಅವರು ಕಂಡ ಕನಸು ನನಸಾಗುತ್ತಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಅಧ್ಯಯನ ಮಾಡಿ ವಿಜ್ಞಾನಿಗಳಾಗುತ್ತಾರೆ ಎಂಬ ವಿಶ್ವಾಸವಿದೆ. ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆ ವಿದ್ಯಾರ್ಥಿಗಳ ಕೌಶಲ ಗಮನಿಸಬೇಕು ಎಂದರು.
ಯುವ ನಾಯಕ ಉತ್ತಮ ಪಾಟೀಲ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಅರಿವು ಮೂಡಿಸುವ ದೃಷ್ಟಿಯಿಂದ ಸಿಬಿಎಸ್‌ಇ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಅವಕಾಶ ನೀಡುವ ದೃಷ್ಟಿಯಿಂದ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದು ಹೇಳಿದರು.
ಬಿ.ಎ. ಪೂಜಾರಿ, ನಿರ್ದೇಶಕಿ ಮೀನಾಕ್ಷಿ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ, ರೀನಾ ಅಂಗಡಿ, ಸಾಯಿ ಸಮಿತಿ ಅಧ್ಯಕ್ಷ ಪ್ರದೀಪ ಮಾಳಿ, ಪಪಂ ಸದಸ್ಯ ಅಭಯಕುಮಾರ ಮಗದುಮ, ತುಳಸಿದಾಸ ವಾಸವಾಡೆ, ಮಹಾದೇವ ಉಲಪೆ, ಅಣ್ಣಾಸಾಹೇಬ ಭೋಜಕರ, ಆರ್.ಟಿ.ಚೌಗುಲಾ, ಪ್ರಾಚಾರ್ಯೆ ರೂಪಾಲಿ ದೇಸಾಯಿ, ಶಮಿಕಾ ಶಾ, ಸಿಇಒ ಬಾಳಾಸಾಹೇಬ ಹವಲೆ, ಸಂದೀಪ ಮಗದುಮ ಇತರರಿದ್ದರು.