ಯರಗಟ್ಟಿಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ, ಶಾಸಕ ವಿಶ್ವಾಸ ವೈದ್ಯ ಅವರನ್ನು ತಾಲೂಕಿನ ಪಿಕೆಪಿಎಸ್‌ಗಳ ವತಿಯಿಂದ ಶನಿವಾರ ಸನ್ಮಾನಿಸಲಾಯಿತು. ಮುರಘರಾಜೇಂದ್ರ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಗಣಪತಿ ಮಹಾರಾಜರು, ನೀಲಕಂಠ ಸಿದ್ದಬಸನ್ನವರ, ಚಂದ್ರು ಜಂಬ್ರಿ, ಶಂಕರ ಇಟ್ನಾಳ ಇತರರಿದ್ದರು.
ಪಟ್ಟಣದ ಮಲ್ಲಿಕಾರ್ಜುನ ಕಲ್ಯಾಣಮಂಟಪದಲ್ಲಿ ಯರಗಟ್ಟಿ ತಾಲೂಕಿನ ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರು ಬ್ಯಾಂಕಿನ ಸಾಲ ಸೌಲಭ್ಯಗಳ ಸದುಪಯೋಗ ಪಡೆಯಬೇಕು. ತಾಲೂಕಿನಲ್ಲಿ 34 ಪಿಕೆಪಿಎಸ್ ಇದ್ದು, ಎಲ್ಲ ಸಂಘಗಳ ಸಹಕಾರ ಲಭಿಸಿರುವುದು ನನ್ನ ಸುದೈವ ಎಂದರು.
ಎಸ್.ಎಂ.ಪತ್ತಾರ, ವಿನಯಕುಮಾರ ದೇಸಾಯಿ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಯರಗಟ್ಟಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಪ್ರಕಾಶ ವಾಲಿ, ಬಂಗಾರೆಪ್ಪ ಹರಳಿ, ವಿಠ್ಠಲ ದೇವರೆಡ್ಡಿ, ಡಿ.ಡಿ.ಟೋಪೋಜಿ, ಪುಂಡಲೀಕ ಮೇಟಿ, ಹೊನ್ನಪ್ಪ ಖಂಡ್ರಿ, ಮಹಾಂತೇಶ ಗೋಡಿ, ಕೀರಪ್ಪ ಹದ್ದನ್ನವರ, ಮಲಿಕಸಾಬ್ ಬಾಗವಾನ, ಬಾಳಪ್ಪ ಕೌಜಲಗಿ, ಪ್ರವೀಣ ರಾಮಪ್ಪನವರ, ಮಹಾಂತೇಶ ಉಪ್ಪಿನ, ಉಮೇಶ ಮಾಗುಂಡನವರ, ಅಶೋಕ ಕುಡಚಿ, ಗೋವಿಂದಪ್ಪ ಮುರಗಟ್ಟಿ, ತಾಲೂಕಿನ ಪಿಕೆಪಿಎಸ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿ ಇದ್ದರು.