ಮುರಗೋಡ ಮಹಾಂತ ದುರದುಂಡೀಶ್ವರ ಮಠದಲ್ಲಿ ಅನ್ನ ದಾಸೋಹ ನಡೆಸುವಂತೆ ನೀಲಕಂಠ ಸ್ವಾಮೀಜಿಗೆ ಅಣ್ಣಾಸಾಹೇಬ ಜೊಲ್ಲೆ 10 ಲ ರೂ. ಮೊತ್ತದ ಚೆಕ್​ ನೀಡಿದರು. ಅಪ್ಪಾಸಾಹೇಬ ಕುಲಗೂಡೆ, ಶಾಸಕಿ ಶಶಿಕಲಾ ಜೊಲ್ಲೆ, ಮಹಾಂತೇಶ ದೊಡಗೌಡರ, ಅರವಿಂದಗೌಡ ಪಾಟೀಲ, ವಿರೂಪಾ ಮಾಮನಿ ಇತರರಿದ್ದರು.  
ಬೆಳಗಾವಿ

ಬಿಡಿಸಿಸಿ ಬ್ಯಾಂಕ್​ ಉನ್ನತಿಗೆ ಬದ್ಧ

ವಿಠ್ಠಲ ಹಣಮಂತ ಬಾಳೇಕುಂದ್ರಿ
ಮುರಗೋಡ: ಬಿಡಿಸಿಸಿ ಬ್ಯಾಂಕ್​ ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಈ ಬ್ಯಾಂಕ್​ ಬೆಳವಣಿಗೆಗೆ ಮುರಗೋಡ ಮಹಾಂತ ಶಿವಯೋಗಿಗಳ ಕೊಡುಗೆ ಅಪಾರ ಎಂದು ಬಿಡಿಸಿಸಿ ಬ್ಯಾಂಕ್​ ಅಧ್ಯ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಸ್ಥಳಿಯ ಮಹಾಂತ ದುರದುಂಡೀಶ್ವರ ಮಠದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬಿಡಿಸಿಸಿ ಬ್ಯಾಂಕ್​ ನಿರ್ದೇಶಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ತಾಲೂಕಿನ ರೈತರ ಸಮಸ್ಯೆಗೆ ಬಿಡಿಸಿಸಿ ಬ್ಯಾಂಕ್​ ಆಡಳಿತ ಮಂಡಳಿ ಸ್ಪಂದಿಸಲಿದೆ ಎಂದರು.
ಮಠದ ನೀಲಕಂಠ ಸ್ವಾಮೀಜಿ ಮಾತನಾಡಿ, ಜನಪರ ಸೇವೆ ಮಾಡುವವರಿಗೆ ಉತ್ತಮ ಭವಿಷ್ಯವಿದ್ದು, ಆಸ್ತಿಗಿಂತ ಜನಮೆಚ್ಚುಗೆ ಗಳಿಸಿ ಶ್ರೀಮಂತರಾಗಲಿ ಎಂದು ಆಶೀರ್ವದಿಸಿದರು.
ಮಾಜಿ ಅಧ್ಯ ಅಪ್ಪಾಸಾಹೇಬ ಕುಲಗೂಡೆ, ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಬ್ಯಾಂಕ್​ ಬೆಳವಣಿಗೆ ಎಲ್ಲರ ಸಹಕಾರ ಅಗತ್ಯ ಎಂದರು. ಶ್ರೀಮಠಕ್ಕೆ ಪ್ರತಿವರ್ಷ ಅನ್ನ ದಾಸೋಹ ಉದ್ದೇಶಕ್ಕೆ ಬೆಳಗಾವಿ ಡಿಸಿಸಿ ಬ್ಯಾಂಕನಿಂದ 10 ಲ ರೂಪಾಯಿ ಚೆಕ್​ ನೀಡಲಾಯಿತು.
ನಿರ್ದೇಶಕರಾದ ಮಹಾಂತೇಶ ದೊಡಗೌಡರ, ಅರವಿಂದಗೌಡ ಪಾಟೀಲ, ವಿರೂಪಾ ಮಾಮನಿ, ನೀಲಕಂಠ ಕಪ್ಪಲಗುದ್ದಿ, ಈಶ್ವರ ಉಳ್ಳಾಗಡ್ಡಿ, ಬಿಡಿಸಿಸಿ ಬ್ಯಾಂಕ್​ ಮ್ಯಾನೇಜರ್​ ಗುರು ಮೆಟಗುಡ್ಡ, ವಿ.ಬಿ.ದೇಸಾಯಿ, ಅಶೋಕ ಶೆಟ್ಟರ, ಸಚಿನ ದೇಸಾಯಿ, ಶಂಕರ ಮಾಡಲಗಿ, ಕುಮಾರ ಪೂಜೇರಿ, ಈರಣ್ಣ ಸಿದ್ಧನಗೌಡರ, ವಿವಿಧ ಪಿಕೆಪಿಎಸ್​ ಸಂದವರು ಇದ್ದರು.