ಸವದತ್ತಿ ಕೆಎಲ್‌ಇ ಸಂಸ್ಥೆಯ ಬಿ.ಬಿ.ಮಮದಾಪುರ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಿ.ಬಿ.ಮಮದಾಪುರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಾಬಣ್ಣ ಗಾಡಗೋಳಿ, ಬಿ.ವಿ.ಚಿಲಕಂಡಿ, ಮೀನಾಕ್ಷಿ ವಾಲಿ, ಬಿ.ವಿ.ಬಿ.ನರಗುಂದ ಇತರರಿದ್ದರು. 
ಬೆಳಗಾವಿ

ಬಿ.ಬಿ.ಮಮದಾಪುರ ಕಾರ್ಯ ಮಾದರಿ

ಪ್ರಶಾಂತ ಹೂಗಾರ

ಸವದತ್ತಿ:

ಕೆಎಲ್‌ಇ ಸಂಸ್ಥೆಯ ಸ್ಥಾಪನೆ ಹಾಗೂ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ ಸಪ್ತ ಋಷಿಗಳಲ್ಲಿ ಒಬ್ಬರಾದ ಲಿಂ.ಬಿ.ಬಿ.ಮಮದಾಪುರ ಅವರ ಶಿಕ್ಷಣ ಸೇವೆ ಯುವ ಪೀಳಿಗೆಗೆ ಮಾದರಿ ಎಂದು ಎಸ್‌ಕೆ ಪಿಯು ಕಾಲೇಜು ಉಪನ್ಯಾಸಕಿ ಮೀನಾಕ್ಷಿ ವಾಲಿ ಹೇಳಿದರು.

ಕೆಎಲ್‌ಇ ಸಂಸ್ಥೆಯ ಬಿ.ಬಿ.ಮಮದಾಪುರ ಬಾಲಕಿಯರ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಿಂ.ಬಿ.ಬಿ.ಮಮದಾಪುರ 53ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಮದಾಪುರ ಅವರು ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕೆಂಬ ಆಶಯದಿಂದ ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಬಲ ತುಂಬಿದರು ಎಂದರು. ವಂಶಸ್ಥ ಬಸವರಾಜ ಹೂಗಾರ ಮಾತನಾಡಿ, ಶಿಕ್ಷಣ ಉದ್ಯೋಗ ಪಡೆಯುವ ಸಾಧನವಲ್ಲ. ವ್ಯಕ್ತಿತ್ವ ನಿರ್ಮಾಣ ಹಾಗೂ ಸಮಾಜದ ಪ್ರಗತಿಗೆ ದಾರಿ ತೋರಿಸುವ ಶಕ್ತಿಯಾಗಿದೆ. ವಿದ್ಯಾರ್ಥಿನಿಯರು ಶಿಕ್ಷಣದ ಜತೆಗೆ ಶಿಸ್ತು, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಬಾಬಣ್ಣ ಗಾಡಗೋಳಿ ಮಾತನಾಡಿ, ಮಹನೀಯರ ಆದರ್ಶ ಪಾಲಿಸಿದರೆ ಅವರ ಸ್ಮರಣೆ ಸಾರ್ಥಕವಾಗುತ್ತದೆ ಎಂದರು.
ಮುಖ್ಯಶಿಕ್ಷಕ ಬಿ.ವಿ.ಚಿಲಕಂಡಿ, ನಿವೃತ್ತ ಮುಖ್ಯ ಶಿಕ್ಷಕ ಬಿ.ವಿ.ಬಿ.ನರಗುಂದ, ಪಿ.ವೈ.ಗೋಕಾಕ, ಪಿ.ಬಿ.ತುರಮರಿ, ಡಿ.ಎಸ್.ದಿಗ್ಗಿಮಠ, ಎಂ.ಜೆ.ಅಂಬಲಿ, ಎಸ್.ವಿ.ಖೋತ, ಬಿ.ಬಿ.ಜಾಬರ, ಎಸ್.ಎಸ್.ಅಂಗಡಿ, ವಿದ್ಯಾರ್ಥಿಗಳಾದ ಸಂಧ್ಯಾ ಲಂಗೋಟಿ, ಅನುಪ್ರಿಯಾ ಗೊರಗುದ್ದಿ ಇತರರಿದ್ದರು.