ಸಂಕೇಶ್ವರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರ ಮೂರ್ತಿ ಮೆರವಣಿಗೆಯಲ್ಲಿ ಹುಣಸೀಕೊಳ್ಳಮಠದ ಸಿದ್ಧಬಸವ ದೇವರನ್ನು ಶಾಸಕ ನಿಖಿಲ ಕತ್ತಿ ಸನ್ಮಾನಿಸಿದರು. ಅಪ್ಪಾಸಾಹೇಬ ಶಿರಕೋಳಿ ಇತರರಿದ್ದರು. 
ಬೆಳಗಾವಿ

ಬಸವೇಶ್ವರ ಮೂರ್ತಿ ಮೆರವಣಿಗೆ ಅದ್ದೂರಿ

ರಾಘವೇಂದ್ರಗೌಡ ಭೀ ಪಾಟೀಲ್
ಪಟ್ಟಣದ ಗಾಂಧಿ ವೃತ್ತದಲ್ಲಿ ಯಮಕನಮರಡಿ ಹುಣಸೀಕೊಳ್ಳಮಠದ ಸಿದ್ಧಬಸವ ದೇವರು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೋಡುಗರ ಕಣ್ಮನ ಸೆಳೆಯಿತು. ವಿವಿಧ ಜಾನಪದ ಕಲಾತಂಡಗಳು, ಡೊಳ್ಳು ಕುಣಿತ, ರೂಪಕ ನೃತ್ಯ, ಭಕ್ತಿ ಗೀತೆ ಹಾಗೂ ಸಾಂಪ್ರದಾಯಿಕ ವಾದ್ಯಗಳು ಮೆರವಣಿಗೆಗೆ ಮೆರುಗು ನೀಡಿದವು. ಯುವಸಮೂಹ ಬಸವೇಶ್ವರರ ಜಯೋಷ ಕೂಗಿ ಸಂಭ್ರಮ ಹೆಚ್ಚಿಸಿತು.
ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರಿಗೆ ದುರದುಂಡೀಶ್ವರ ಶಾಖಾ ಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯ ಭಕ್ತರು ದಾಸೋಹದಲ್ಲಿ ಭಾಗಿಯಾಗಿ ಪ್ರಸಾದ ಸವಿದರು. ಮೆರವಣಿಗೆಯಲ್ಲಿ ಪಾಲ್ಗೊಂಡ ಶಾಸಕ ನಿಖಿಲ ಕತ್ತಿ ಹುಣಸೀಕೊಳ್ಳಮಠದ ಸಿದ್ಧಬಸವ ದೇವರನ್ನು ಸನ್ಮಾನಿಸಿದರು.
ವೀರಶೈವ-ಲಿಂಗಾಯತ ಸಮುದಾಯದ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ ಜಾರಕಿಹೊಳಿ, ಗಣ್ಯರಾದ ಶಿವಾನಂದ ಮುಡಶಿ, ಗಜಾನನ ಕ್ವಳ್ಳಿ, ಶಂಕರರಾವ ಹೆಗಡೆ, ಬಸನಗೌಡ ಪಾಟೀಲ, ಅಮರ ನಲವಡೆ, ಡಾ.ಜಯಪ್ರಕಾಶ ಕರಜಗಿ, ಸಂತೋಷ ಪಾಟೀಲ, ರೋಹನ ನೇಸರಿ, ಆನಂದ ಸಂಸುದ್ದಿ, ಚಿದಾನಂದ ಕರದನ್ನವರ, ಸಂತೋಷ ಮುಡಶಿ, ಡಾ.ರಮೇಶ ದೊಡಭಂಗಿ, ಪ್ರಶಾಂತ ಪಾಟೀಲ, ಕಿರಣಸಿಂಗ ರಜಪೂತ, ಅವಿನಾಶ ನಲವಡೆ, ಮಹೇಶ ಹಟ್ಟಿಹೊಳಿ, ಚೇತನ ಬಶೆಟ್ಟಿ, ಸಾಗರ ಜಕಾತೆ, ಉಮೇಶ ಡಿ, ಶಂಕರಗೌಡ ದೇಸಾಯಿ, ಶಿವಶಂಕರ ಬಾಗೇವಾಡಿ, ಕಾಡಪ್ಪ ಬಸ್ತವಾಡಿ, ದಯಾನಂದ ಲಟ್ಟಿ, ಉಷಾ ರವದಿ, ಸಂಗೀತಾ ಕುಂಬಾರ ಇತರರಿದ್ದರು.