ಬೆಳಗಾವಿ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ನೂತನ ಉಪಾಧ್ಯಕ್ಷ ಸಚಿನ ಶಿವಣ್ಣವರನ್ನು ಅಧ್ಯಕ್ಷ ರಮೇಶ ಕಳಸಣ್ಣವರ ಅಭಿನಂದಿಸಿದರು. ವಿಜಯಕುಮಾರ ಅಂಗಡಿ, ಪ್ರಕಾಶ ಬಾಳೇಕುಂದ್ರಿ, ರಮೇಶ ಸಿದ್ದಣ್ಣರವ, ಬಸವರಾಜ ಉಪ್ಪಿನ, ಸರಳಾ ಹೇರೆಕರ ಇತರರಿದ್ದರು.
ಬೆಳಗಾವಿ: ಬೆಳಗಾವಿ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರಾಗಿ ಸಚಿನ ರಾಮಪ್ಪ ಶಿವಣ್ಣವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕ್ ಉಪಾಧ್ಯಕ್ಷ ಸತೀಶ ಪಾಟೀಲ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಈಚೆಗೆ ಪ್ರಧಾನ ವ್ಯವಸ್ಥಾಪಕ ವಿಶಾಲಕುಮಾರ ಅಂಟಿನ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಉಳಿದ ಅವಧಿಗೆ ಸಚಿನ ಶಿವಣ್ಣವರ ಅವಿರೋಧ ಆಯ್ಕೆಯಾದರು.
ಆಯ್ಕೆ ಬಳಿಕ ಶಿವಣ್ಣವರ ಮಾತನಾಡಿ, ಸಂಸ್ಥೆಯ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿ ನಿರ್ದೇಶಕ ಮಂಡಳಿ ಸದಸ್ಯರ ಸಹಕಾರದೊಂದಿಗೆ ಪಾರದರ್ಶಕ ಆಡಳಿತವನ್ನು ನೀಡುವುದಾಗಿ ಭರವಸೆ ನೀಡಿದರು.
ಶಿವಣ್ಣವರಗೆ ಅಭಿನಂದಿಸಿ ಅಧ್ಯಕ್ಷ ರಮೇಶ ಕಳಸಣ್ಣವರ ಮಾತನಾಡಿ, ನೂತನ ಉಪಾಧ್ಯಕ್ಷರು ಬ್ಯಾಂಕಿನ ಅಭಿವೃದ್ಧಿಗೆ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಆಡಳಿತಕ್ಕೆ ಸುಗಮವಾಗಿ ಸಹಕರಿಸಬೇಕು. ಬ್ಯಾಂಕನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಡಿಜಿಟಲೈಜೇಶನ್ ಮತ್ತು ಸಮಾಜಮುಖಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಮಾದರಿ ಸಹಕಾರ ಬ್ಯಾಂಕ್ ಆಗಿ ನಿರ್ಮಿಸುವ ಸಂಕಲ್ಪ ಮಾಡಿದ್ದೇವೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕೇಳಿಕೊಂಡರು. ನಿರ್ದೇಶಕರಾದ ವಿಜಯಕುಮಾರ ಅಂಗಡಿ, ಪ್ರಕಾಶ ಬಾಳೇಕುಂದ್ರಿ, ರಮೇಶ ಸಿದ್ದಣ್ಣವರ, ಬಸವರಾಜ ಉಪ್ಪಿನ, ಸರಳಾ ಹೇರೆಕರ, ಗಿರೀಶ ಬಾಗಿ, ಸತೀಶ ಪಾಟೀಲ, ಬಾಲಚಂದ್ರ ಬಾಗಿ, ಜಗದೀಶ ಖಡಬಡಿ, ಪೂಜಾ ಹುಕ್ಕೇರಿ, ನಿಖಿಲ ಝೊಂಡ, ಚಂದ್ರಕಾಂತ ಕಟ್ಟಿಮನಿ, ಪ್ರಧಾನ ವ್ಯವಸ್ಥಾಪಕ ವಿ.ವಿ.ಅಂಟಿನ ಹಾಗೂ ಸಿಬ್ಬಂದಿ ಅಭಿನಂದಿಸಿದರು.