ಅಥಣಿ ಗಚ್ಚಿನಮಠದ ಶ್ರಾವಣಮಾಸದ ಅಂಗವಾಗಿ ಬಸವ ಸಂಸ್ಕೃತಿ ಪ್ರವಚನ ಸಮಾರಂಭದಲ್ಲಿ ಡಾ.ಎಂ.ಜಿ.ಹಂಜಿ ಮಾತನಾಡಿದರು. ಶಿವಬಸವ ಸ್ವಾಮೀಜಿ, ಪ್ರಭುಚನ್ನಬಸವ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಬಸವಣ್ಣನವರ ವಚನ ಬದುಕಿಗೆ ದಾರಿದೀಪ

ಅಥಣಿ: ಗಚ್ಚಿನಮಠದ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಆರ್ಶೀವಾದ ಲದಿಂದ ವಚನ ಪಿತಾಮಹ ಡಾ..ಗು.ಹಳ್ಳಿಕಟ್ಟಿಯವರು ಬಸವಣ್ಣನವರ ವಚನಗಳನ್ನು ನೀಡಿದ್ದಾರೆ ಎಂದು ಸ್ಥಳೀಯ ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಕಾರ್ಯಾಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ಹೇಳಿದರು.
ನಗರದ ಗಚ್ಚಿನಮಠದಲ್ಲಿ ಶ್ರಾವಣಮಾಸದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣನವರ ವಚನ ಬದುಕಿಗೆ ದಾರಿದೀಪ. 12ನೇ ಶತಮಾನದ ಬಸವಾದಿ ಶಿವಶರಣರ ವಚನ ಸಂದೇಶದಂತೆ ಮುರುಘೇಂದ್ರ ಶಿವಯೋಗಿಗಳ ಜೀವನ ನಮಗೆಲ್ಲ ಮಾರ್ಗದರ್ಶಕವಾಗಿದೆ ಎಂದರು. ಮೋಟಗಿಮಠದ ಪ್ರಭುಚನ್ನಬಸವ ಸ್ವಾಮಿಜಿ ಮಾತನಾಡಿ, ಗಚ್ಚಿನಮಠ ಅರವಿನ ಅರುಣೋದಯ, ಶಿವಧ್ಯಾನದ ಶಿವನಿಧಿಯನ್ನಾಗಿಸಿದ ಮುರುಘೇಂದ್ರ ಶಿವಯೋಗಿಗಳು ಹಲವಾರು ಮಹನೀಯರಿಗೆ ಆಶೀರ್ವದಿಸಿ ನಾಡಿನ ಉದ್ಧಾರಕ್ಕೆ ಶ್ರಮಿಸಿದವರು. ಅದರಂತೆ ಶ್ರೀಮಠದಲ್ಲಿ ಬಸವಪುರಾಣ, ಅಲ್ಲಮಪ್ರಭುದೇವರ ಚರಿತ್ರೆಯನ್ನು ಭಕ್ತರಿಗೆ ತಿಳಿಪಡಿಸಿದವರು. ಅದಕ್ಕೆ ಶ್ರೀಮಠ ಭಕ್ತರ ಕಾಮಧೇನು ಕಲ್ಪವೃಕ್ಷವಾಗಿ ಬೆಳೆದಿದೆ ಎಂದರು.
ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಸಾಕ್ಷಾತ ಶಿವಯೋಗಿಯನ್ನು ನೋಡುವುದಾದರೆ ಅಥಣಿ ಗಚ್ಚಿನಮಠಕ್ಕೆ ಹೋಗಿ ಎಂದು ಹುಬ್ಬಳಿ ಸಿದ್ಧಾರೂಢರು ಭಕ್ತರಿಗೆ ಹೇಳುತ್ತಿದ್ದರಂತೆ ಅದರಂತೆ ನಾಡಿನೆಲ್ಲೆಡೆಯಿಂದ ಭಕ್ತರು ಗಚ್ಚಿನಮಠದ ಶಿವಯೋಗಿಗಳ ಗದ್ದುಗೆ ದರ್ಶನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಹೆಸ್ಕಾಂ ಅಭಿಯಂತರ ಎಸ್.ಜಿ.ಸಂಪನ್ನವರ, ಎಸ್.ಬಿ. ಪಾರ್ಥನಹಳ್ಳಿ, ಮುರುೇಶ ಅಳ್ಳಿಮಟ್ಟಿ, ಸಂತೋಷ ಬುಡ್ಡರ, ಮುರುಗೆಪ್ಪ ಗೆಜ್ಜಿ ಅವರನ್ನು ಸನ್ಮಾನಿಸಲಾಯಿತು. ಪ್ರಭುದೇವ ಸ್ವಾಮೀಜಿ ಪ್ರವಚನ ನೆರವೇರಿಸಿದರು.