ಮಾಂಜರಿ ಗ್ರಾಮದಲ್ಲಿ ಬಸವ ಪಂಚಮಿ ಆಚರಿಸಲಾಯಿತು. ಸಿದ್ದಾರ್ಥ ಗಾಯಗೋಳ, ರಾಘವೇಂದ್ರ ಲಂಬುಗೋಳ, ನಾಗಪ್ಪ ವಡವಡೆ, ರಾಜು ವಡವಡೆ ಇತರರಿದ್ದರು.
ಮಾಂಜರಿ: ಹಬ್ಬಗಳು ಪ್ರಗತಿಗೆ ಪೂರಕವಾಗಿದ್ದರೂ ಕೆಲ ಆಚರಣೆಗಳು ಮೂಢನಂಬಿಕೆಗೆ ಪ್ರಚೋದನೆ ನೀಡುತ್ತಿದ್ದು, ಇದನ್ನು ಹೋಗಲಾಡಿಸಲು ನಾಗರ ಪಂಚಮಿಯಂದು ಗ್ರಾಮದ ಹಳೆಯ ಬಸ್ ನಿಲ್ದಾಣದಲ್ಲಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಬಸವ ಪಂಚಮಿಯನ್ನಾಗಿ ಆಚರಿಸಲಾಗುತ್ತದೆ ಎಂದು ಸಾಮಾಜಿಕ ಚಿಂತಕ ಸಿದ್ದಾರ್ಥ ಗಾಯಗೋಳ ಹೇಳಿದರು.
ಗ್ರಾಮದಲ್ಲಿ ಸೋಮವಾರ ಮಾನವ ಬಂಧುತ್ವ ವೇದಿಕೆ ಮತ್ತು ಅಂಬೇಡ್ಕರ ಕಲಾ ಮತ್ತು ಕ್ರೀಡಾ ಯುವಕ ಮಂಡಳ ಸಹಯೋಗದಲ್ಲಿ ನಾಗರ ಪಂಚಮಿ ಹಿನ್ನೆಲೆಯಲ್ಲಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಬಸವ ಪಂಚಮಿ ಆಚರಿಸಿ ಮಾತನಾಡಿ, ಹುತ್ತಕ್ಕೆ ಹಾಲು ಸುರಿದು ಅವೈಜ್ಞಾನಿಕವಾಗಿ ಆಚರಣೆಗೆ ಜನರು ಮುಂದಾಗುತ್ತಾರೆ. ಇದರಿಂದ ಅಪಾರ ಪ್ರಮಾಣ ಹಾಲು ವ್ಯರ್ಥವಾಗುತ್ತಿದೆ. ರಾಜ್ಯವೊಂದರಲ್ಲೇ ಪ್ರತಿ ವರ್ಷ ಅಪೌಷ್ಟಿಕತೆಯಿಂದ ಸಾವಿರಾರು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಹಾಲನ್ನು ವ್ಯರ್ಥ ಮಾಡುವ ಬದಲಿಗೆ ಮಕ್ಕಳಿಗೆ ಮತ್ತು ಬಡವರಿಗೆ ಹಾಲು ಕೊಡಬೇಕು ಎಂದರು.
ರವೀಂದ್ರ ವಡವಡೆ, ರಾಹುಲ ಗಾಯಗೋಳ, ಅಪ್ಪಾಸಾಬ ಕಾಸಾಯಿ, ಶಿವರಾಜ ಮಾಂಜ್ರೆಕರ, ರವಿ ಈರಾಯಿ, ರೋಹಣ ಕಾಸಾಯಿ, ಹನುಮಂತ ಮಾಯನ್ನವರ, ನಾಗಪ್ಪ ವಡವಡೆ, ರಾಜು ವಡವಡೆ, ಕಲ್ಲಪ್ಪ ನಾಂದ್ರೆ, ಸಂಜಯ ನಾಂದ್ರೆ ಇತರರಿದ್ದರು. ರಾಘವೇಂದ್ರ ಲಂಬುಗೋಳ ನಿರೂಪಿಸಿದರು.