ಬೆಳಗಾವಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಬಸವರಾಜ ರೊಟ್ಟಿ ಮಾತನಾಡಿದರು. ಮುರುೇಂದ್ರಗೌಡ ಪಾಟೀಲ, ಆಶೋಕ ಮಳಗಲಿ, ಈರಣ್ಣಯ ದಯಣ್ಣವರ ಶಂಕರ ಗುಡಸ ಇತರರಿದ್ದಾರೆ.
ಬೆಳಗಾವಿ : ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿ ಪ್ರಯುಕ್ತ ವಿವಿಧ ಸಂಘಟನೆಗಳಿಂದ ಏ.26ರಂದು ನಗರದಲ್ಲಿ ಬೃಹತ್ ಮೆರವಣಿಗೆ ಆಯೋಜಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಸಂಚಾಲಕ ಬಸವರಾಜ ರೊಟ್ಟಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಸಂಜೆ 4ಕ್ಕೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಆರಂಭಗೊಳ್ಳುವ ಮೆರವಣಿಗೆ ಕಾಕತಿ ವೇಸ್, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಕಾಲೇಜ್ ರಸ್ತೆ ಮೂಲಕ ಸಂಚರಿಸಿ ಲಿಂಗರಾಜ್ ಕಾಲೇಜಿನ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ. ಬಳಿಕ ಮೈದಾನದಲ್ಲಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, ಬಸವಣ್ಣನವರ ಜೀವನ, ತತ್ವ ಹಾಗೂ ಸಂದೇಶಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮೆರವಣಿಗೆಯಲ್ಲಿ ಬಸವಣ್ಣನವರ ಮೂರ್ತಿ ಹೊತ್ತುಕೊಂಡ ಡಿಜಿಟಲ್ ಆನೆ ವಿಶೇಷ ಆಕರ್ಷಣೆಯಾಗಲಿದೆ. ಪಲ್ಲಕ್ಕಿಯಲ್ಲಿ ವಚನ ಕಟ್ಟುಗಳ ಮೆರವಣಿಗೆ , ಉಡುಪಿಯ ಚಂಡೆ ಮದ್ದಳೆ ಕಲಾವಿದರ ಪ್ರದರ್ಶನ, ಮಾದನಭಾವಿಯ(ಧಾರವಾಡ) 40 ಜನರ ತಂಡದಿಂದ ವಚನಾಧಾರಿತ ಕೋಲಾಟ ನೃತ್ಯ, ವಿವಿಧ ಮಹಿಳಾ ಸಂಘಟನೆಗಳ 60 ಸದಸ್ಯರಿಂದ ವಚನಾಧಾರಿತ ನೃತ್ಯ, ದಾವಣಗೆರೆಯ ಬಸವ ಲೋಕ ಭಜನಾ ಮಂಡಳಿ, ವಿವಿಧ ಸಂಘ ಸಂಸ್ಥೆಗಳಿಂದ ರೂಪಕ ವಾಹನಗಳು ಮತ್ತು ವಿವಿಧ ಸಾಂಸ್ಕೃತಿಕ ವೇಷಧಾರಿಗಳು ಮೆರವಣಿಗೆಗೆ ಮೆರಗು ನೀಡಲಿದ್ದಾರೆ. ಲಿಂಗರಾಜ ಕಾಲೇಜ್ ಆವರಣದಲ್ಲಿ ಲೇಸರ್ ಶೋ, ಕ್ರ್ಯಾಕರ್ ಶೋ ಸೇರಿದಂತೆ ವಿವಿಧ ಆಕರ್ಷಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮುರುೇಂದ್ರಗೌಡ ಪಾಟೀಲ, ಅಶೋಕ ಮಳಗಲಿ, ಈರಣ್ಣ ದಯಣ್ಣವರ, ಶಂಕರ ಗುಡಸ, ಮನೋಹರ ಪಡುಕಲಕಟ್ಟಿ, ರಮೇಶ ತುಬಚಿ, ಮುರುಗೆಪ್ಪ ಬಾಳಿ, ಮಹಾಂತೇಶ ಗುಡಸ, ಕೆ.ಶರಣ ಪ್ರಸಾದ, ಆನಂದ ಗುಡಸ ಸುದ್ದಿಗೋಷ್ಠಿಯಲ್ಲಿದ್ದರು.