ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಬಸವಜಯಂತಿ ಆಚರಿಸಲಾಯಿತು. ಡಾ.ಮಹಾಂತಪ್ರಭು ಸ್ವಾಮೀಜಿ, ನಾಗರಾಜ ನಾವಲಗಟ್ಟಿ, ರತ್ನಾ ಹೇಮಂತ, ರೂಪಾ ಹೆಬ್ಬಂಡಿ, ಷಡಕ್ಷರಿ ಅಡವಯ್ಯನಮಠ, ವಿಶುಕುಮಾರ ಲೋಕಪಾಲ ಇತರರಿದ್ದರು.
ಅಥಣಿ:
ಆಸ್ಟ್ರೇಲಿಯಾ ದೇಶದ ಸಿಡ್ನಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಸವಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶಿವಶರಣರು ಆಚರಿಸಿದ ಶಿವಯೋಗ, ಕಾಯಕ, ದಾಸೋಹ, ಪ್ರಜಾಪ್ರಭುತ್ವ ಮತ್ತು ಸಮಾನತೆ ಅರಿತಾಗ ವಿಶ್ವ ಸಾಮರಸ್ಯದಿಂದ ಕೂಡಿದ ಕರ್ತಾರನ ಕಮ್ಮಟವಾಗುತ್ತದೆ.
21ನೇ ಶತಮಾನ ಯುದ್ಧದ ಶತಮಾನವಾಗಬಾರದು. ದಯವೇ ಧರ್ಮದ ಮೂಲ ಆಶಯವಾಗಬೇಕು. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಬೇಕು. ಸರ್ವರೂ ಸಮಾನರು ಎನ್ನುವ ತತ್ತ್ವ ಅಳವಡಿಸಿಕೊಂಡಾಗ ನಾವೆಲ್ಲ ಪ್ರಜ್ಞಾವಂತರಾಗುತ್ತೇವೆ ಎಂದರು.
ಕರ್ಮಭೂಮಿ ಆಸ್ಟ್ರೇಲಿಯಾದಲ್ಲಿ ಇದ್ದುಕೊಂಡು ಜನ್ಮಭೂಮಿಯ ಬಸವಣ್ಣನವರ ಸಿದ್ಧಾಂತ ಅನುಸರಿಸುತ್ತಿರುವ ಅನಿವಾಸಿ ಭಾರತೀಯರ ಅಭಿಮಾನವನ್ನು ಶ್ಲಾಘಿಸಿದರು.