ಬಸವರಾಜ ಹೊಸಮನಿ (49) ಕೊಲೆಗೀಡಾದವ 
ಬೆಳಗಾವಿ

ಬಸಿಡೋಣಿಯಲ್ಲಿ ಬರ್ಬರ ಹತ್ಯೆ

ಧರ್ಮರಾಜ ರಾಮನಗೌಡ ಪಾಟೀಲ
ಸವದತ್ತಿ: ತನ್ನ ತಾಯಿಯ ಜತೆಗೆ ಸಲುಗೆ ಹೊಂದಿದ್ದಾರೆಂದು ಶಂಕಿಸಿ ವ್ಯಕ್ತಿಯೋರ್ವನನ್ನು ಹತ್ಯೆಗೈದಿರುವ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಬಳಿ ಮಂಗಳವಾರ ನಡೆದಿದೆ. ಬಸಿಡೋಣಿ ಗ್ರಾಮದ ಬಸವರಾಜ ಹೊಸಮನಿ (49) ಕೊಲೆಗೀಡಾದವ
ಈರಯ್ಯ ಮಠಪತಿ (32) ಕೊಲೆ ಆರೋಪಿ. ಬಸಿಡೋಣಿ ಗ್ರಾಮದ ಈರಯ್ಯನ ತಾಯಿ ಜತೆಗೆ ಬಸವರಾಜ ಸಲುಗೆ ಹೊಂದಿದ್ದಾನೆಂದು ಫೆ.2ರಂದು ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಬಳಿ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಸವದತ್ತಿ ಠಾಣೆ ಪೊಲೀಸರು ತಿಳಿಸಿದ್ದಾರೆ.