ನಗರದ ಮಹಾವೀರ ಭವನದಲ್ಲಿ ಉದ್ಯಮಿ ದಿ.ಬಾಳಾಸಾಹೇಬ ಪಾಟೀಲರ ಸ್ಮರಣಾರ್ಥ ಆಯೋಜಿಸಲಾದ ಶೋಕಸಭೆಯಲ್ಲಿ ಶ್ರೀಪಾಲ ಖೇಮಲಾಪುರೆ ಮಾತನಾಡಿದರು. ಗೋಪಾಲ ಜಿನಗೌಡಾ, ಅಭಯ ಪಾಟೀಲ, ಪ್ರಮೋದ ಪಾಟೀಲ, ಪುಷ್ಪಕ್ ಹನಮನ್ನವರ, ಸಿ.ವೈ.ಪಾಟೀಲ, ರವಿರಾಜ ಪಾಟೀಲ, ಅನಂತ ಲಾಡ್, ರಾಮ ಕಸ್ತೂರಿ, ರಾಜೇಂದ್ರ ಜೈನ ಇತರರಿದ್ದರು.
ಬೆಳಗಾವಿ: ಉದ್ಯಮಿ ದಿ.ಬಾಳಾಸಾಹೇಬ ಪಾಟೀಲರ ಸಮಾಜಮುಖಿ ಕಾರ್ಯ ಒಂದು ಜಾತಿಗೆ ಸೀಮಿತವಾಗಿರಲಿಲ್ಲ. ಜಾತಿ, ಭಾಷೆ, ಧರ್ಮದ ಅಂತರಗಳನ್ನು ಮೀರಿ, ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದರು. ಅವರ ಸೇವೆ ಎಲ್ಲರಿಗೂ ಅನುಕರಣೆಯಾಗಿದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಮಹಾವೀರ ಭವನದಲ್ಲಿ ಮಂಗಳವಾರ ಉದ್ಯಮಿ ದಿ.ಬಾಳಾಸಾಹೇಬ ಪಾಟೀಲರ ಸ್ಮರಣಾರ್ಥ ಆಯೋಜಿಸಿದ್ದ ಶೋಕಸಭೆಯಲ್ಲಿ ಅವರು ಮಾತನಾಡಿ, ಬಾಳಾಸಾಹೇಬರ ನಿಧನದಿಂದ ಕೇವಲ ಜೈನ ಸಮಾಜ ಮಾತ್ರವಲ್ಲ, ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಅನೇಕ ಸಂಸ್ಥೆಗಳ ಆಧಾರಸ್ತಂಭ ಆಗಿದ್ದರು ಎಂದರು.
ವಿನೋದ ದೊಡ್ಡಣ್ಣವರ ಮಾತನಾಡಿ, ಬಾಳಾಸಾಹೇಬರು ವಿಶಾಲ ಹೃದಯಿ ಆಗಿದ್ದರು. ಭರತೇಶ ಶಿಕ್ಷಣ ಸಂಸ್ಥೆಗೆ ಅವರು ಯಾವಾಗಲೂ ಮಾರ್ಗದರ್ಶನ ನೀಡುತ್ತಿದ್ದರು. ಅವರು ದೂರದೃಷ್ಟಿಯ
ನಾಯಕರು, ಅವರ ಮಕ್ಕಳು ಅವರ ಪರಂಪರೆಯನ್ನು ಮುಂದುವರಿಸಲಿದ್ದಾರೆ ಎಂಬ ವಿಶ್ವಾಸ ಇದೆ ಎಂದರು.
ಉದ್ಯಮಿ ಗೋಪಾಲ ಜಿನಗೌಡಾ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅಭಯ ಪಾಟೀಲ, ಜಿತೋ ಸಂಸ್ಥೆ ಅಧ್ಯಕ್ಷ ಹರ್ಷವರ್ಧನ ಇನ್ಸಲ್, ಪ್ರಮೋದ ಪಾಟೀಲ, ಪುಷ್ಪಕ್ ಹನಮನ್ನವರ, ಸಿ.ವೈ.ಪಾಟೀಲ, ರವಿರಾಜ ಪಾಟೀಲ, ಅನಂತ ಲಾಡ್, ಶ್ರೀಪಾಲ ಖೇಮಲಾಪುರೆ, ರಾಮ ಕಸ್ತೂರಿ, ರಾಜೇಂದ್ರ ಜೈನ್, ನೀಲಾಂಬರಿ ವನಕುದ್ರೆ ಮಾತನಾಡಿದರು. ಸಚಿನ ಪಾಟೀಲ, ತುಷಾರ ಪಾಟೀಲ, ಬಿ.ಟಿ.ಪಾಟೀಲ ಇತರರಿದ್ದರು.