ಬೈಲಹೊಂಗಲದಲ್ಲಿ ದಿ.ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕ್ ಶತಮಾನೋತ್ಸವ ಸವಿನೆನಪಿನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ನೀಲಕಂಠ ಸ್ವಾಮೀಜಿ, ಪ್ರಭುನೀಲಕಂಠ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಬೈಲಹೊಂಗಲ ಅರ್ಬನ್ ಬ್ಯಾಂಕ್ ಮಾದರಿ

ಬೈಲಹೊಂಗಲ: ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ದಿ.ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕ್ ನಾಡಿನ ಜನರ ಆರ್ಥಿಕತೆ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಮುರಗೋಡ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ಯಾಂಕ್‌ನ ಶತಮಾನೋತ್ಸವ ಸವಿನೆನಪಿನ ಕಟ್ಟಡದ ಶಂಕುಸ್ಥಾಪನೆ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ದಿ.ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕ್ ರಾಜ್ಯದ ಪ್ರಮುಖ ಬ್ಯಾಂಕ್‌ಗಳ ಶ್ರೇಣಿಯಲ್ಲಿದೆ. ದಿ.ಎಂ.ಸಿ.ಮೆಟಗುಡ್ಡ ಹಾಕಿಕೊಟ್ಟ ಸನ್ಮಾರ್ಗದಲ್ಲಿ ಆಡಳಿತ ಮಂಡಳಿ ಉತ್ತಮ ಕಾರ್ಯ ನಿರ್ವಹಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.
ಮೂರು ಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಹಾಗೂ ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಜನೋಪಯೋಗಿ ಯೋಜನೆ ಹಾಗೂ ವಿಶ್ವಾಸಾರ್ಹ ಸೇವೆಯೊಂದಿಗೆ ಮುನ್ನಡೆಯುತ್ತಿರುವ ಬ್ಯಾಂಕ್ ಮಾದರಿಯಾಗಿದೆ ಎಂದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಉದ್ಯಮಿ ವಿಜಯ ಮೆಟಗುಡ್ಡ ಭೂಮಿಪೂಜೆ ನೆರವೇರಿಸಿ, ಶಂಕುಸ್ಥಾಪನೆ ಲಕ ಅನಾವರಣಗೊಳಿಸಿದರು.
ಬ್ಯಾಂಕ್ ಅಧ್ಯಕ್ಷ ಡಾ.ಬಿ.ಎಚ್.ಮೆಟಗುಡ್ಡ, ಉಪಾಧ್ಯಕ್ಷ ಎಂ.ಆರ್.ಬೋಳನ್ನವರ, ನಿರ್ದೇಶಕ ರಾದ ಎಂ.ಎಂ.ಮೆಟಗುಡ್ಡ, ಸಿ.ಸಿ.ಹೊಂಡದಕಟ್ಟಿ, ಎ.ಎಸ್.ಮೆಟಗುಡ್ಡ, ಎಸ್.ಬಿ. ಪತ್ತೆಣ್ಣವರ, ಆರ್.ಎಂ.ಮೆಟಗುಡ್ಡ, ಬಿ.ವಿ.ಸಾಲಿಮಠ, ಸಿ.ವಿ.ಹೊಸೂರ, ಎಂ.ಎ.ನಾಯಿಕ, ವಿ.ಎಸ್.ಮೆಟಗುಡ್ಡ, ಜಿ.ಸಿ.ಮೆಟಗುಡ್ಡ, ವಿ.ಎಸ್.ಬೆಳವಡಿ, ಬಿ.ಬಿ.ಮಡಿವಾಳರ, ಬಿ.ವೈ.ಬೆಟಗೇರಿ, ಎ.ಎಂ. ಮೆಟಗುಡ್ಡ, ಎಸ್. ಬಿ.ಮೆಟಗುಡ್ಡ, ಆರ್.ಎಸ್.ಬಿಳ್ಳೂರ, ಕೆ.ಎಂ.ಹೊಸೂರ,
ಎಸ್.ಜಿ.ಬೂದಯ್ಯನವರಮಠ, ಎಸ್.ಎಸ್. ಬಾವಿಹಾಳ, ಮುಖ್ಯಕಾರ್ಯನಿರ್ವಾಹಕ ಸುರೇಶ ಗೀರನವರ ಹಾಗೂ ಸಿಬ್ಬಂದಿ ಇದ್ದರು.