ಬೆಟಗೇರಿಯಲ್ಲಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರನ್ನು ಕೋಡಿಮಠದ ಶ್ರೀಗಳು ಸನ್ಮಾನಿಸಿದರು. ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರು, ವೀರನಾಯ್ಕ ನಾಯ್ಕರ, ಬಸವರಾಜ ಬೆಟಗೇರಿ ಇತರರಿದ್ದರು. 
ಬೆಳಗಾವಿ

ಸೌಹಾರ್ದ ವೃದ್ಧಿಸುವ ಅಯ್ಯಪ್ಪಸ್ವಾಮಿ ಪೂಜೆ

ಗ್ರಾಮದ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 28ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ, ಅನ್ನಸಂತರ್ಪಣೆ, ದಾನಿಗಳಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಅಯ್ಯಪ್ಪಸ್ವಾಮಿ ಸರ್ವ ಜನಾಂಗ ಸೌಹಾರ್ದದದ ಪ್ರತೀಕ. ಅಯ್ಯಪ್ಪಸ್ವಾಮಿ ಬಗ್ಗೆ ನನಗೆ ಬಹಳ ಒಲವಿದೆ. ಬರುವ ವರ್ಷ ಮಳೆ, ಬೆಳೆ ಚೆನ್ನಾಗಿ ಆಗುತ್ತೆ. ಜಾತಿ-ಧರ್ಮ ಸಂಘರ್ಷಗಳಿಂದ ಯುದ್ಧ, ಬಾಂಬು, ಪ್ರಳಯ ಆಗುತ್ತದೆ. ಎಲ್ಲವನ್ನೂ ಯುಗಾದಿ ನಂತರ ಹೇಳುತ್ತೇನೆ. ಇಲ್ಲಿನ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಕಾರ್ಯ ಸಂತಸ ತಂದಿದೆ ಎಂದರು.
ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಸ್ಥಳೀಯ ಅಯ್ಯಪ್ಪಸ್ವಾಮಿ ಸನ್ನಿಧಾನದ ಸ್ಥಳದಲ್ಲಿ ಸಮುದಾಯ ಭವನ ನಿರ್ಮಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಚೇತನ ದೇವರು, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮೀಜಿ, ಕಡಕೋಳ ಸಿದ್ಧರಾಯಜ್ಜನವರು, ವೇದಮೂರ್ತಿ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ,
ಹನುಮಂತ ವಡೇರ, ಮುತ್ಯಪ್ಪ ವಡೇರ, ಅಯ್ಯಪ್ಪಸ್ವಾಮಿ ಮಾಲಾಧಾರಿಗಳಾದ ವೀರನಾಯ್ಕ ನಾಯ್ಕರ, ಬಸವರಾಜ ಬೆಟಗೇರಿ, ಬಸವಂತ ಕೋಣಿ, ಲಕ್ಷ್ಮಣ ನೀಲಣ್ಣವರ, ಸುಭಾಷ ಕರೆನ್ನವರ, ರಾಜು ಪತ್ತಾರ, ಬಸವರಾಜ ಪಣದಿ, ಲಕ್ಷ್ಮಣ ಸೋಮಗೌಡ್ರ, ಸದಾಶಿವ ಕುರಿ ಇತರರಿದ್ದರು.