ಉರಬಿನಹಟ್ಟಿ ಗ್ರಾಮದಲ್ಲಿ ಬಾಲ್ಯ ವಿವಾಹ ತಡೆ ಕುರಿತಾದ ಬೀದಿನಾಟಕವನ್ನು ಗಣ್ಯರು ಉದ್ಘಾಟಿಸಿದರು. ಎಚ್.ಆರ್.ಲವಕುಮಾರ, ಎಚ್.ರೋಹಿತ್, ಶಾಂತಾ ಅಂಗರಗಟ್ಟಿ, ಸರಸ್ವತಿ ಕಂಬಾರ, ನಿಂಗನಗೌಡ ಪಾಟೀಲ ಇತರರಿದ್ದರು. 
ಬೆಳಗಾವಿ

ಬಾಲ್ಯ ವಿವಾಹ ತಡೆ ಜಾಗೃತಿ ಅಗತ್ಯ

ಮಮದಾಪುರ: ಭಾಷಣ, ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಜಾಗತಿ ಮೂಡಿಸಿದಲ್ಲಿ ಜನರಿಗೆ ಹೆಚ್ಚು ಪರಿಣಾಮಕಾರಿ ಮನವರಿಕೆಯಾಗಲು ಸಹಕಾರಿಯಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವದ್ಧಿ ಜಿಲ್ಲಾ ನಿರ್ದೇಶಕ ಎಚ್.ಆರ್.ಲವಕುಮಾರ ಹೇಳಿದರು.
ಉರಬೀನಹಟ್ಟಿ ಗ್ರಾಮದ ಬಾಳಯ್ಯ ಮಠದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಈಚೆಗೆ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ತಡೆಗಟ್ಟುವಿಕೆ, ಶೌಚಗೃಹ ಬಳಕೆ ಹಾಗೂ ಟಿವಿ ಮೊಬೈಲ್ ಹಾವಳಿ ಕುರಿತಾದ ಜಾಗೃತಿ ಮೂಡಿಸುವ ಬೀದಿ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಗ್ರಾಮೀಣ ಜನರ ಆರ್ಥಿಕ ಹಾಗೂ ಸಾಮಾಜಿಕ ಅಭಿವದ್ಧಿಗೆ ಶ್ರಮಿಸುತ್ತಿದೆ. ಕೇವಲ ಸಾಲ ಸೌಲಭ್ಯವಷ್ಟೇ ಅಲ್ಲದೆ, ಸಾಮಾಜಿಕ ಪಿಡುಗು ನಿರ್ಮೂಲನೆ ಮಾಡುವಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕುಂದಗೋಳ ತಾಲೂಕಿನ ಹರ್ಲಾಪುರದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕಲಾವಿದರ ತಂಡ ಬಾಲ್ಯ ವಿವಾಹ ತಡೆ ಕುರಿತು ಬೀದಿನಾಟಕ ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸಿತು. ತಾಲೂಕು ಯೋಜನಾಧಿಕಾರಿ ಎಚ್.ರೋಹಿತ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಶಾಂತಾ ಅಂಗರಗಟ್ಟಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಸರಸ್ವತಿ ಕಂಬಾರ, ಜಯಶ್ರೀ ಪಾಟೀಲ, ನಿಂಗನಗೌಡ ಪಾಟೀಲ, ಬಾಳಪ್ಪ ಹಡಗಿನಾಳ, ಎಲ್.ಬಸಲಿಂಗಪ್ಪ ಇತರರಿದ್ದರು.