ರಾಷ್ಟ್ರ ಮಟ್ಟದ ಟೆಕ್ನೋ&ಕಲ್ಚರಲ್ ೆಸ್ಟ್ನಲ್ಲಿ ಜನರಲ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದಿರುವ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಡಾ.ವಿಜಯ ಅಥವಲೆ, ಪ್ರೊ.ಸತೀಶ ದೇಶಪಾಂಡೆ ಇದ್ದಾರೆ.
ಬೆಳಗಾವಿ: ನಗರದ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈಚೆಗೆ ಬೆಂಗಳೂರಿನ ಗ್ಲೋಬಲ್ ತಾಂತ್ರಿಕ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಟೆಕ್ನೋ&ಕಲ್ಚರಲ್ ೆಸ್ಟ್ನಲ್ಲಿ ಜನರಲ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಮಹಾವಿದ್ಯಾಲಯದ 100 ವಿದ್ಯಾರ್ಥಿಗಳು ಭಾಗವಹಿಸಿ, ಸಾಂಸತಿಕ, ತಾಂತ್ರಿಕ, ಸಾಹಿತ್ಯ, ಲಲಿತಕಲೆ, ಕ್ರೀಡೆ, ನತ್ಯ, ಸಂಗೀತ, ನಾಟಕ, ೋಟೋಗ್ರಫಿ ಹಾಗೂ ಇ&ಗೇಮಿಂಗ್ ವಿಭಾಗಗಳಲ್ಲಿ ಬಹುಮಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ.ವಿಜಯ ಅಥವಲೆ, ಪ್ರೊ.ಸತೀಶ ದೇಶಪಾಂಡೆ, ಅಧ್ಯಾಪಕರು, ಸಂಯೋಜಕರು ಹರ್ಷ ವ್ಯಕ್ತಪಡಿಸಿದ್ದಾರೆ.