ಪಾಶ್ಚಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಿರಿಯರ ಸಮಾವೇಶದಲ್ಲಿ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಅಭಿನವ ಮಂಜುನಾಥ ಸ್ವಾಮೀಜಿ, ವಿಶ್ವಾರಾಧ್ಯ ಶಿವಾಚಾರ್ಯರು, ಮಂಜುನಾಥ ಕುನ್ನೂರ, ಬಸವರಾಜ ಹುಕ್ಕೇರಿ ಇತರರಿದ್ದರು.
- ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹಿತವಚನ
ಅಂಕಲಗಿ: ಶಕ್ತಿಯುತ ರಾಷ್ಟ್ರದ ನಿರ್ಮಾಣಕ್ಕೆ ಸಂಸ್ಕಾರವಂತ ಮಕ್ಕಳ ಅಗತ್ಯವಿದೆ. ಮಕ್ಕಳನ್ನು ಸಂಸ್ಕಾರವಂತರನ್ನಾಗಿಸುವಲ್ಲಿ ಪಾಲಕರ ಪಾತ್ರ ಪ್ರಮುಖವಾಗಿದೆ. ಮಕ್ಕಳೇ ಬಲಿಷ್ಠ ರಾಷ್ಟ್ರದ ಬಹು ದೊಡ್ಡ ಶಕ್ತಿ ಎಂದು ಕೊಲ್ಲಾಪುರ ಕನ್ಹೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಪಾಶ್ಚಾಪುರ ಗ್ರಾಮದಲ್ಲಿ ಗುರು ರಾಘವೇಂದ್ರ ಆರಾಧನಾ ಮಹೋತ್ಸವ ಕಮಿಟಿ ಆಶ್ರಯದಲ್ಲಿ ೫೦ನೇ ಸುವರ್ಣ ಆರಾಧನಾ ಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಹಿರಿಯರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ನೆಲದಲ್ಲಿ ಜನ್ಮ ತಾಳಿದ ನಾವೆಲ್ಲ ಭಾಗ್ಯವಂತರು. ಧರ್ಮದಿಂದ ಸಾಧನೆ ಸಾಧ್ಯ ಎಂಬುದಕ್ಕೆ ಮಹಾಭಾರತ, ರಾಮಾಯಣ ಅತ್ಯುತ್ತಮ ನಿದರ್ಶನ. ಪ್ರಸ್ತುತದಲ್ಲಿ ಪರಿವಾರ ಸಮೇತ ದೇವಸ್ಥಾನಗಳಿಗೆ ಹೋಗುವ ಪರಿಪಾಠ ಬೆಳೆಯಬೇಕು ಎಂದು ತಿಳಿಸಿದರು.
ಆರ್‌ಎಸ್‌ಎಸ್‌ನ ಉತ್ತರ ಕರ್ನಾಟಕದ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಮಾತನಾಡಿ, ಶ್ರದ್ಧಾ, ಭಕ್ತಿಯಿಂದ ರಾಘವೇಂದ್ರಸ್ವಾಮಿ ಆರಾಧಿಸಿದರೆ ಸಂಕಷ್ಟ ನಿವಾರಣೆಯಾಗುತ್ತದೆ. ಪ್ರತಿಯೊಬ್ಬರಲ್ಲೂ ಅದ್ವಿತೀಯ ಶಕ್ತಿಯಿದ್ದು, ಅದನ್ನು ಜಾಗೃತವಾಗಿರಿಸಲು ಕಾಯಕ ಯೋಗಿಯಾಗಬೇಕು. ಜತೆಗೆ ದೇಶದ ಸುಭದ್ರತೆಗೆ ಬದ್ಧವಾಗಿರಬೇಕು ಎಂದರು.
ಅಭಿನವ ಮಂಜುನಾಥ ಸ್ವಾಮೀಜಿ, ವಿಶ್ವಾರಾಧ್ಯ ಶಿವಾಚಾರ್ಯರು, ಮಾಜಿ ಸಂಸದ ಮಂಜುನಾಥ ಕುನ್ನೂರ, ಬಸವರಾಜ ಹುಕ್ಕೇರಿ, ರವಿ ಹಂಜಿ, ಬಸವರಾಜ ಅಂಬಿಗೇರ, ಆರ್.ಕೆ.ದೇಶಪಾಂಡೆ, ಅಣ್ಣಾಸಾಹೇಬ ಮಹಾಜನಶೆಟ್ಟಿ, ಮಂಜುನಾಥ ಪಾಟೀಲ, ಶಿವಾನಂದ ಮಠಪತಿ, ವಿಶ್ವನಾಥ ಪಾಟೀಲ, ಬಸವರಾಜ ಉದೋಸಿ, ಮಲ್ಲಿಕಾರ್ಜುನ ಮಠಪತಿ, ಕುಮಾರ ದುಂಡಗಿ, ಬಸವರಾಜ ಕುರಬೇಟ, ರಾಮು ಅಂಬಿ, ಬಸವರಾಜ ಸಾವಳಗಿ, ಅಜಿತ ಅಂಬಿಗೇರ, ಪಲ್ಲವಿ ಪಾಟೀಲ, ಶಿವಲೀಲಾ ಪಾಟೀಲ, ಮನೀಷಾ ಶಿಂಧೆ, ದೀಪಾ ದೇಶಪಾಂಡೆ, ಜ್ಯೋತಿ ಮಠಪತಿ ಇತರರಿದ್ದರು. ರಾಮಚಂದ್ರ ಕಾಕಡೆ ನಿರೂಪಿಸಿಸಿದರು.