ಸಾಂಗಲಿ ಜಿಲ್ಲಾ ಪ್ರಯಾಣಿಕರ ಎಪೆ ಆಟೋ ಸಂಘದ ವಾರ್ಷಿಕೋತ್ಸವದಲ್ಲಿ ಡಾ.ಚಂದ್ರಶೇಖರ ಹಳಿಂಗಳೆ ಮಾತನಾಡಿದರು. ಮಹೇಶ ಚೌಗುಲೆ ಇತರರಿದ್ದರು.
ಕಾಗವಾಡ: ಆಟೋ ಚಾಲರು ಪಟ್ಟಣದ ಕನ್ನಡಿ ಇದ್ದಂತೆ. ಅವರ ಮೂಲಕ ನಗರದ ಸಂಸ್ಕೃತಿ ಕಂಡುಕೊಳ್ಳಬಹುದು. ಹೊರಗಿನಿಂದ ಬರುವ ಪ್ರಯಾಣಿಕರೊಂದಿಗೆ ಚಾಲಕರು ಸ್ನೇಹಪರವಾಗಿ ವರ್ತಿಸಬೇಕು ಎಂದು ನಿರ್ಮಲ ಆಸ್ಪತ್ರೆ ಮತ್ತು ನಿರ್ಮಲ ಫೌಂಡೇಷನ್ ಅಧ್ಯಕ್ಷ, ಮನಶಾಸ್ತ್ರಜ್ಞ ಡಾ.ಚಂದ್ರಶೇಖರ ಹಳಿಂಗಳೆ ಹೇಳಿದರು.
ಮಿರಜ ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಗಲಿ ಜಿಲ್ಲಾ ಪ್ರಯಾಣಿಕ ಎಪೆ ಆಟೋ ಸಂಘದ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಆರೋಗ್ಯ ಮತ್ತು ಮಾನಸಿಕ ಶಾಂತಿಗಾಗಿ ಸಮಯಾನುಸಾರ ವೈದ್ಯರನ್ನು ಸಂಪರ್ಕಿಸಬೇಕು ಎಂದರು.
ಸಾಂಗಲಿ ನಗರದ ಸಾರಿಗೆ ಉಪನಿರೀಕ್ಷಕಿ ಕೀರ್ತಿ ಕೇಟ, ಸಾರಿಗೆ ಉಪನಿರೀಕ್ಷಕ ಶೇಖರ ನಿಕ್ಕಂ, ಆಟೋ ಚಾಲಕರ ಸಮಸ್ಯೆ ಮತ್ತು ಪ್ರಯಾಣಿಕರ ಸೌಲಭ್ಯ ಕುರಿತು ಚರ್ಚಿಸಿದರು. ನಿರ್ಮಲ್ ಫೌಂಡೇಷನ್ ವತಿಯಿಂದ ಮಿರಜನ ತಾಸಗಾಂವ ರಸ್ತೆಯ ದಿಲಾಸಭವನದಲ್ಲಿ ಅನಾಥ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹೇಶ ಚೌಗುಲೆ, ನಿರ್ಮಲ ಆಸ್ಪತ್ರೆಯ ಮನಶಾಸ್ತ್ರಜ್ಞ ಸಚಿನ ಪಾಟೀಲ, ಫಾದರ್ ಜೋಸೆಫ್ ಇತರರು ಇದ್ದರು.