ಮಿರಜದ ನಿರ್ಮಲ ಆಟಿಸಂ ಮತ್ತು ಕಲಿಕಾ ಅಂಗವೈಕಲ್ಯ ಶಿಕ್ಷಣ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಡಾ.ಚಂದ್ರಶೇಖರ ಹಳಿಂಗೆಳೆ ಮಾತನಾಡಿದರು. ಡಾ.ಮಾಧುರಿ ವಾಂಗಪತಿ, ಡಾ.ಶ್ರದ್ಧಾ ಗಾಯಕವಾಡ ಇತರರಿದ್ದರು. 
ಬೆಳಗಾವಿ

ಸೂಕ್ತ ಚಿಕಿತ್ಸೆಯಿಂದ ಆಟಿಸಂ ದೂರ

ಪ್ರಮುಖ ಮುಖ್ಯಾಂಶಗಳು

  • ಡಾ.ಚಂದ್ರಶೇಖರ ಹಳಿಂಗಳೆ ಹೇಳಿಕೆ
  • ಮಾರ್ಗದರ್ಶನ ಶಿಬಿರ
ಕಾಗವಾಡ: ಆಟಿಸಂ ಒಂದು ರೋಗವಲ್ಲ, ಮಕ್ಕಳಲ್ಲಿ ಮಿದುಳಿನ ಬೆಳವಣಿಗೆಗೆ ಸಂಬಂಧಿಸಿದ ನರ ಅಭಿವೃದ್ಧಿಯ ಅಸ್ವಸ್ಥತೆಯಾಗಿದೆ ಎಂದು ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ, ಪುನರ್ವಸತಿ ಮತ್ತು ಆಟಿಸಂ ಕೇಂದ್ರದ ಮನೋವೈದ್ಯ ಡಾ.ಚಂದ್ರಶೇಖರ ಹಳಿಂಗಳೆ ಹೇಳಿದರು.
ಮಿರಜ ಪಟ್ಟಣದ ನಿರ್ಮಲ ಆಟಿಸಂ ಮತ್ತು ಕಲಿಕಾ ಅಂಗವೈಕಲ್ಯ ಶಿಕ್ಷಣ ಕೇಂದ್ರದಲ್ಲಿ ಆಟಿಸ್ಟಿಕ್ ಫ್ರೈಡ್ ದಿನದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಉಚಿತ ತಪಾಸಣೆ ಮತ್ತು ಮಾರ್ಗದರ್ಶನ ಶಿಬಿರದಲ್ಲಿ ಮಾತನಾಡಿದರು. ಸರಿಯಾದ ಮಾರ್ಗದರ್ಶನ, ಚಿಕಿತ್ಸೆ ಮತ್ತು ತರಬೇತಿಯೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದರು.
ಆಟಿಸಂ ಕೇಂದ್ರದ ಪ್ರಾಂಶುಪಾಲೆ ಡಾ.ಮಾಧುರಿ ವಾಂಗಪತಿ ಮಾತನಾಡಿ, ಆಟಿಸಂ ಲಕ್ಷಣ ಮತ್ತು ಕಾರಣಗಳ ಕುರಿತು ಮಾಹಿತಿ ನೀಡಿದರು.
ಸಿಇಒ ವಿನಾಯಕ ಕವಡೆ ಮಾತನಾಡಿ, ಪಾಲಕರಲ್ಲಿ ಜಾಗೃತಿ ಮೂಡಿಸುವುದು. ಮಕ್ಕಳು ಸರಿಯಾದ ಸಮಯದಲ್ಲಿ ಚಿಕಿತ್ಸೆ ಮತ್ತು ಮಾರ್ಗದರ್ಶನ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದರು.
ಶಿಬಿರದಲ್ಲಿ ಮಕ್ಕಳ ಬುದ್ಧಿಮತ್ತೆ ಪರೀಕ್ಷೆ, ಭಾಷಾ ಮೌಲ್ಯಮಾಪನ, ಬೆಳವಣಿಗೆ ತಪಾಸಣೆ ಮತ್ತು ನಡವಳಿಕೆಯ ಮೌಲ್ಯಮಾಪನ ಸೇರಿದಂತೆ ವಿಶೇಷ ಪರೀಕ್ಷೆ ನಡೆಸಲಾಯಿತು.
ಮಿರಜ, ಸಾಂಗಲಿ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಪಾಲಕರು ಆಗಮಿಸಿದ್ದರು. ನಿರ್ಮಲ ಆಸ್ಪತ್ರೆ ಮತ್ತು ಆಟಿಸಂ ಕೇಂದ್ರದ ಸಿಬ್ಬಂದಿ ಇದ್ದರು.