ಚಿಕ್ಕೋಡಿಯಲ್ಲಿ ಹಮ್ಮಿಕೊಂಡಿದ್ದ ದೈವಜ್ಞ ದರ್ಶನ ಕಾರ್ಯಕ್ರಮವನ್ನು ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಉದ್ಘಾಟಿಸಿದರು. ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ, ರಮೇಶ ಕುಡತರಕರ, ಜಗದೀಶ ಕುರ್ಡೇಕರ ಇತರರಿದ್ದರು.
ಚಿಕ್ಕೋಡಿ: ಧಾರ್ಮಿಕ ಕಾರ್ಯಗಳಿಗೆ ಸಹಕಾರ ನೀಡುವವರು ಜೀವನದಲ್ಲಿ ಪುಣ್ಯ ಗಳಿಸುತ್ತಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಕರ್ಕಿಯ ಜಗದ್ಗುರು ಶ್ರೀ ಶಂಕರಾಚಾರ್ಯ ದೈವಜ್ಞ ಬ್ರಾಹ್ಮಣ ಸಂಸ್ಥಾನದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಪಟ್ಟಣದ ಕೇಶವ ಕಲಾಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ದೈವಜ್ಞ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿತ್ಯ ಸಂಧ್ಯಾವಂದನೆ, ಸತ್ಸಂಗ, ಭಜನೆ ಮೈಗೂಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಿ, ದುಶ್ಚಟಗಳಿಗೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದರು.
ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಪುಣ್ಯ ಕಾರ್ಯದಿಂದ ಮನುಷ್ಯನ ಜೀವನ ಪಾವನವಾಗುತ್ತದೆ ಎಂದು ತಿಳಿಸಿದರು.
ದೈವಜ್ಞ ಸಮುದಾಯದ ಅಧ್ಯಕ್ಷ ರಮೇಶ ಕುಡತರಕರ ಮಾತನಾಡಿದರು. ಉಪಾಧ್ಯಕ್ಷ ಜಗದೀಶ ಕುರ್ಡೇಕರ್, ರಾಜೇಶ ಕಾಗಲಕರ, ಮಧುಕರ ಕುಡತರಕರ, ಸತೀಶ ಕುರ್ಡೇಕರ, ಪ್ರಕಾಶ ಕುಡತರಕರ, ನಾಗೇಶ ಪಾಲನಕರ, ರಾಜೇಶ ಶೇಠ್, ಪ್ರವೀಣ ರೇವಣಕರ, ಪ್ರಕಾಶ ಅಣವೇಕರ, ಅಶೋಕ ವೆರ್ಣೇಕರ, ಪ್ರಶಾಂತ ಕುಡ್ತರಕರ ಇತರರಿದ್ದರು. ಶ್ರೀಕಾಂತ ಸಾವಂತ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು. ಲಹರಿ ಕುಡತರಕರ ಪ್ರಾರ್ಥಿಸಿದರು. ನಾಗರಾಜ ರಾಯ್ಕರ ಸ್ವಾಗತಿಸಿದರು. ಆನಂದ ಅರವಾರೆ ನಿರೂಪಿಸಿದರು.