ಬೋರಗಾಂವ ಪಾರ್ಶ್ವನಾಥ ಜಿನ ಮಂದಿರದಲ್ಲಿ ಹಮ್ಮಿಕೊಂಡಿದ್ದ ಚಂದ್ರಪ್ರಭು ತೀರ್ಥಂಕರ ಪೂಜೆಯಲ್ಲಿ ಅಭಿನಂದನ ಪಾಟೀಲ, ಮೀನಾಕ್ಷಿ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ, ಸುಜಾತಾ ಲಗಾರೆ, ಅನಿಲ ಕಲಾಜೆ ಇತರರಿದ್ದರು.
ಬೋರಗಾಂವ: ಹೊಸವರ್ಷದ ಆರಂಭದಲ್ಲಿ ಸಂಕಷ್ಟ ನಿವಾರಣೆ ಹಾಗೂ ಪುಣ್ಯ ಪ್ರಾಪ್ತಿಯಾಗಲಿ ಎಂದು ದಕ್ಷಿಣ ಭಾರತ ಜೈನ ಸಭೆ ಉಪಾಧ್ಯಕ್ಷ ಅಭಿನಂದನ ಪಾಟೀಲ ಹೇಳಿದರು.
ಪಟ್ಟಣದ 1008 ಪಾರ್ಶ್ವನಾಥ ಜಿನ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚಂದ್ರಪ್ರಭು ತೀರ್ಥಂಕರ ಪೂಜೆಯಲ್ಲಿ ಮಾತನಾಡಿದರು. ಮನಸ್ಸಿನ ಚಂಚಲತೆ ಹೋಗಲಾಡಿಸಿ, ಶಾಂತಿ ಮತ್ತು ಸ್ಥಿರತೆ ಪಡೆಯಲು ಈ ಪೂಜೆ ಮಾಡಲಾಗುತ್ತದೆ. ಚಂದ್ರಪ್ರಭು ಸ್ಮರಣೆಯಿಂದ ಸಂಯಮ ಮತ್ತು ಸತ್ಯದ ಪ್ರೇರಣೆ ಸಿಗುತ್ತದೆ. ಭಕ್ತಿಪೂರ್ವಕವಾಗಿ ಅರ್ಘ್ಯ ಅರ್ಪಿಸಿ, ಮಂಡಲ ಪೂಜೆ ಮಾಡುವುದರಿಂದ ಹೆಚ್ಚಿನ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಜೈನ ಶಾಸ್ತ್ರ ಹೇಳುತ್ತದೆ ಎಂದು ತಿಳಿಸಿದರು.
ಬಸದಿ ಕಮಿಟಿ ಅಧ್ಯಕ್ಷ ಉತ್ತಮ ಪಾಟೀಲ, ಮೀನಾಕ್ಷಿ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ, ಲತಾ ಪಾಟೀಲ, ಸುಜಾತಾ ಲಗಾರೆ, ಅನಿಲ ಕಲಾಜೆ, ರಾಜಗೌಡ ಪಾಟೀಲ, ಅಣ್ಣಾಸಾಹೇಬ ಪಾಟೀಲ, ಉದಯ ನಿಟವೆ, ಅಣ್ಣಾಸಾಹೇಬ ಭೋಜಕರ, ವೃಷಭ ಬಸನ್ನವರ, ರಾಜು ಪಾಟೀಲ, ಲಲಿತಾ ಪಾಟೀಲ, ಭಾರತಿ ಪಾಟೀಲ, ಉಜ್ವಲಾ ಪಾಟೀಲ, ಶೋಭಾ ಹವಲೆ, ಅನಿತಾ ಮಗದಮ್ಮ, ಸಿದ್ಧಾರ್ಥ ಪಾಟೀಲ ಇತರರಿದ್ದರು.