ಅರಟಾಳದಲ್ಲಿ ಮಾಳಿಂಗೇಶ್ವರ, ಮಲ್ಲಿಕಾರ್ಜುನ, ದುರ್ಗಾದೇವಿ, ಹನುಮಾನ ಹಾಗೂ ವೀರಭದ್ರ ದೇವರ ಪಲ್ಲಕ್ಕಿಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಲ್ಲಪ್ಪ ಪೂಜಾರಿ, ಶಿವಲಿಂಗ ಪೂಜಾರಿ, ಮಲ್ಲಿಕಾರ್ಜುನ ತೆಲಸಂಗ ಇತರರಿದ್ದರು. 
ಬೆಳಗಾವಿ

ಶ್ರದ್ಧಾ-ಭಕ್ತಿಯ ದೈವಾರಾಧನೆಯಿಂದ ಪುಣ್ಯ ಪ್ರಾಪ್ತಿ

ಅರಟಾಳ: ಮಾನವ ಜನ್ಮ ಶ್ರೇಷ್ಠವಾದುದು, ಭವಕ್ಕೆ ಬಂದ ಮೇಲೆ ಪರಮಾತ್ಮನ ಅಣತಿಯಂತೆ ನಡೆಯಬೇಕು. ಅಂದಾಗ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ. ಶ್ರಾವಣ ಮಾಸದಲ್ಲಿ ದೇವರ ಆರಾಧನೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಮಲ್ಲಪ್ಪ ಪೂಜಾರಿ ಹೇಳಿದರು.
ಗ್ರಾಮದಲ್ಲಿ ಸೋಮವಾರ ಶ್ರಾವಣ ಮಾಸದ ಅಂಗವಾಗಿ ಮಾಳಿಂಗೇಶ್ವರ, ಮಲ್ಲಿಕಾರ್ಜುನ, ದುರ್ಗಾದೇವಿ, ಹನುಮಾನ, ವೀರಭದ್ರ ದೇವರ ಪಲ್ಲಕ್ಕಿಗಳು ಝಂಜರವಾಡ ಹತ್ತಿರ ಕೃಷ್ಣ ನದಿಗೆ ಹೋಗಿ ಪೂಜೆ ಸಲ್ಲಿಸಿಕೊಂಡು ಬರುವ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿವಲಿಂಗ ಪೂಜಾರಿ, ರಾಮಪ್ಪ ಭಂಡಾರಿ, ಮಲ್ಲಿಕಾರ್ಜುನ ತೆಲಸಂಗ, ಸತ್ಯಪ್ಪ ಪೂಜಾರಿ, ಸಿದ್ಧಲಿಂಗ ಪೂಜಾರಿ, ನಿಂಗಪ್ಪ ಪೂಜಾರಿ, ಗ್ರಾಪಂ ಮಾಜಿ ಸದಸ್ಯ ಮಹಾದೇವ ಢಂಗಿ, ಯಲ್ಲಪ್ಪ ಹಟ್ಟಿ, ದುಂಡಪ್ಪ ಹಟ್ಟಿ, ಮುತ್ತಪ್ಪ ಪೂಜಾರಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಮಲ್ಲಪ್ಪ ಪೂಜಾರಿ, ಹೊನ್ನಪ್ಪ ತೆಲಸಂಗ, ಶಿವಲಿಂಗ ಪೂಜಾರಿ, ಹುಸೇನಸಾಬ್ ನದಾಫ್, ಗ್ರಾಪಂ ಮಾಜಿ ಸದಸ್ಯ ಮಾಳಪ್ಪ ಕಾಂಬಳೆ, ಕರವೇ ಅಧ್ಯಕ್ಷ ಶ್ರೀಶೈಲ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ, ಬಸಪ್ಪ ತೆಲಸಂಗ, ಗಿರಮಲ್ಲ ಹಟ್ಟಿ, ಮಲ್ಲಿಕಾರ್ಜುನ ತೆಲಸಂಗ, ಚಂದ್ರಪ್ಪ ಮಾದರ ಇತರರಿದ್ದರು.