ಪಟ್ಟಣದ ಹಲ್ಯಾಳ ರಸ್ತೆಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಭೂಮಿಪೂಜೆ ನೆರವೆರಿಸಿದರು. ಮಲ್ಲಿಕಾರ್ಜುನ ಮಗದುಮ್ಮ, ಎಸ್.ಆರ್.ಘೂಳಪ್ಪನವರ, ರವಿ ಬಡಕಂಬಿ, ನರಸು ಬಡಕಂಬಿ, ರಾಜು ಗುಡೋಡಗಿ ಇತರರಿದ್ದರು.
ಅಥಣಿ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿಭಜಕ ನಿರ್ಮಿಸಿ, ಸಸಿ ನೆಟ್ಟು, ವಿದ್ಯುತ್ ದೀಪ ಅಳವಡಿಸುವ ಮೂಲಕ ಪಟ್ಟಣ ಹಸಿರೀಕರಣ ಕಾರ್ಯ ನಡೆದಿದ್ದು, ಸರ್ವಾಂಗೀಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಜತ್ತ-ಜಾಂಬೋಟಿ ರಸ್ತೆ, ಅಥಣಿ ಸಂಕೋನಟ್ಟಿ ಗ್ರಾಮದ ಮಧ್ಯೆ ಹಾಗೂ ದರೂರ, ಹಲ್ಯಾಳ ರಸ್ತೆ ವಿಸ್ತರಣೆ ಹಾಗೂ ವಿಭಜಕ, ಸೈನ್ ಬೋರ್ಡ್ ಅಳವಡಿಕೆ ಸೇರಿ ಒಟ್ಟು ೩.೩೫ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪಟ್ಟಣದ ಮಹಾತ್ಮ ಜ್ಯೋತಿಬಾ ಫುಲೆ ವೃತ್ತದಿಂದ ಸಂಕೋನಟ್ಟಿ, ಹಲ್ಯಾಳ, ದರೂರ ಗ್ರಾಮದಿಂದ ಜಾಂಬೋಟಿ ರಾಜ್ಯ ಹೆದ್ದಾರಿಗಳಲ್ಲಿ ಅಪಘಾತವಾಗುವ ಸ್ಥಳಗಳನ್ನು ಪೊಲೀಸ್ ಇಲಾಖೆ ಮೂಲಕ ಗುರುತಿಸಿ ಆ ಸ್ಥಳಗಳಲ್ಲಿ ಒಟ್ಟು ೩.೩೫ ಕೋಟಿ ರೂ. ವೆಚ್ಚದಲ್ಲಿ ಇನ್ನುಳಿದ ರಸ್ತೆ ವಿಸ್ತರಿಸಿ ಅಭಿವೃದ್ಧಿ ಮಾಡಲಾಗುವುದು. ಇದಕ್ಕೆ ರಸ್ತೆ ಅಕ್ಕಪಕ್ಕದಲ್ಲಿನ ಜನರು ಸಹಕರಿಸಬೇಕೆಂದು ಮನವಿ ಮಾಡಿದರು.
ಲೋಕೋಪಯೋಗಿ ಇಲಾಖೆ ಅಭಿಯಂತ ಮಲ್ಲಿಕಾರ್ಜುನ ಮಗದುಮ್ಮ, ಪಿ.ಜಿ.ಸೂರ್ಯವಂಶಿ, ಗುತ್ತಿಗೆದಾರ ಶಿವರುದ್ರ ಘೂಳಪ್ಪನವರ, ಪುರಸಭಾ ಸದಸ್ಯ ರಾಜು ಗುಡೊಡಗಿ, ಮಲ್ಲು ಹುದ್ದಾರ, ವಿಲೀನ ಯಳಮಲ್ಲೆ, ನರಸು ಬಡಕಂಬಿ, ಬಿ.ಎನ್.ಪಾಟೀಲ, ಉದಯ ಸೋಳಸಿ, ಮುಷ್ತಾಕ್ ಮುಲ್ಲಾ, ರವಿ ಬಡಕಂಬಿ, ಶ್ರೀಶೈಲ ನಾಯಿಕ, ಬೀರಪ್ಪ ಯಂಕಚ್ಚಿ, ಆಸಿಫ ತಾಂಬೊಳಿ, ಆನಂದ ಮಾಕಾಣಿ ಇತರರಿದ್ದರು.