ಬೆಳಗಾವಿ ತಾಲೂಕಿನ ಮಚ್ಚೆ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ ಸಂಖ್ಯೆ 3ರಲ್ಲಿ ಶಾಲೆಯ ವಿದ್ಯಾರ್ಥಿಗಳು ರಚಿಸಿದ ಪುಸ್ತಕವನ್ನು ಅತಿಥಿಗಳು ಬಿಡುಗಡೆಗೊಳಿಸಿದರು.ಅನಿಲಕುಮಾರ ಪಾಟೀಲ, ಪ್ರಮೋದ, ಓಂಕಾರ, ಪ್ರಾಂಜಲ್, ಧನಂಜಯ ಮತ್ತು ತನಿಷ್ಕಾ ಇತರರಿದ್ದರು.
ಬೆಳಗಾವಿ: ವಿದ್ಯಾರ್ಥಿಗಳು ರಚನಾತ್ಮಕ ಮನೋಭಾವ ಬೆಳೆಸಿಕೊಳ್ಳುವುದರಿಂದ ಭವಿಷ್ಯತ್ತಿನಲ್ಲಿ ಸಾಧನೆ ಶಿಖರವೇರುವುದು ಸರಳವಾಗುತ್ತದೆ. ಸೃಜನಾತ್ಮಕ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಕೇಂದ್ರೀಯ ವಿದ್ಯಾಲಯಗಳ ಅಸಿಸ್ಟಂಟ್ ಕಮಿಷ್ನರ್ ಪ್ರಮೋದ್ ಸಲಹೆ ನೀಡಿದರು.
ಇಲ್ಲಿನ ಮಚ್ಚೆ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ ಸಂಖ್ಯೆ 3ರಲ್ಲಿ ಬುಧವಾರ ವಿದ್ಯಾರ್ಥಿಗಳು ರಚಿಸಿದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಓದುವ, ಬರೆಯುವ ಹವ್ಯಾಸ ನಿರಂತರವಾಗಿರಬೇಕು. ಇದು ಪರೀಕ್ಷೆಗೆ ಸೀಮಿತವಾಗಬಾರದು. ವಿದ್ಯಾರ್ಥಿಗಳಿಂದ ಪುಸ್ತಕ ರಚನೆ ಶ್ಲಾಘನೀಯ ಎಂದರು.
ಸದಲಗಾ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಮಹೇಂದ್ರ ಕಾಲ್ರಾ, ಪ್ರಾಂಶುಪಾಲ ಅನಿಲಕುಮಾರ ಪಾಟೀಲ, ಪುಸ್ತಕ ರಚನೆಕಾರ ವಿದ್ಯಾರ್ಥಿಗಳಾದ ಓಂಕಾರ, ಪ್ರಾಂಜಲ್, ಧನಂಜಯ ಮತ್ತು ತನಿಷ್ಕಾ ಇತರರಿದ್ದರು.