ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ನರಸನ್ನವರ, ನಿರ್ದೇಶಕ ಸದಾನಂದ ಹಿರೇಮಠ, ಬಾಬು ಜಾರಕಿಹೊಳಿ, ಮುಖಂಡರಾದ ಶಿವನಗೌಡ ಪಾಟೀಲ, ಶಂಕರಗೌಡ ಪಾಟೀಲ, ಬಸಗೌಡ ದೇಸಾಯಿ, ಅಪ್ಪಣ್ಣ ಖಾತೇದಾರ, ಮುಖ್ಯ ಕಾರ್ಯನಿರ್ವಾಹಕ ಎಸ್.ಎಸ್.ಮಲ್ಲಾಪುರೆ ಸೇರಿದಂತೆ ಇತರರು ಇದ್ದರು. 
ಬೆಳಗಾವಿ

ವಿಮೆ ಯೋಜನೆಯಿಂದ ಕುಟುಂಬಕ್ಕೆ ನೆರವು

ಹುಕ್ಕೇರಿ: ರೈತರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯನ್ನು ಬಿಡಿಸಿಸಿ ಬ್ಯಾಂಕ್ ಮೂಲಕ ಅನುಷ್ಠಾನಗೊಳಿಸಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಹೇಳಿದರು.
ಗುಡಸ ಗ್ರಾಮದ ಪಿಕೆಪಿಎಸ್ ಸದಸ್ಯರು ಈಚೆಗೆ ನಿಧನರಾದ ಹಿನ್ನೆಲೆಯಲ್ಲಿ ಸೋಮವಾರ ಮೃತರ ವಾರಸುದಾರರಾದ ಕಾಶವ್ವ ನಾಸಿಪುಡಿ ಅವರಿಗೆ 1 ಲಕ್ಷ ರೂ. ಮತ್ತು ಸಂತೋಷ ತಳವಾರ ಅವರಿಗೆ 2 ಲಕ್ಷ ರೂ. ಮೊತ್ತದ ವಿಮೆ ಚೆಕ್ ವಿತರಿಸಿ ಮಾತನಾಡಿದರು.
ಸಂಘದ 7 ಮೃತ ಸದಸ್ಯರ ವಾರಸುದಾರರಿಗೆ 14 ಲಕ್ಷ ರೂ. ಹಾಗೂ ಖಾಸಗಿ ವಿಮಾ ಕಂಪನಿಯಿಂದ 10 ಜನ ವಾರಸುದಾರರಿಗೆ 10 ಲಕ್ಷ ರೂ. ವಿಮೆ ಮೊತ್ತ ನೀಡಲಾಗಿದೆ ಎಂದರು. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ನರಸನ್ನವರ ಮಾತನಾಡಿ, ಸಂಘ ಸದಸ್ಯರ ಭವಿಷ್ಯ ದೃಷ್ಟಿಯಿಂದ ಇಂತಹ ಯೋಜನೆಗಳನ್ನು ಅಳವಡಿಸಿಕೊಂಡಿದೆ ಎಂದರು.
ಗುಡಸ ಪಿಕೆಪಿಎಸ್ ಕಾರ್ಯಾಲಯದಲ್ಲಿ ಮೃತ ಸದಸ್ಯರ ವಾರಸುದಾರರಿಗೆ ವಿಮೆ ಹಣದ ಚೆಕ್‌ನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ವಿತರಿಸಿದರು. ಮಲ್ಲಿಕಾರ್ಜುನ ನರಸನ್ನವರ, ಸದಾನಂದ ಹಿರೇಮಠ, ಬಾಬು ಜಾರಕಿಹೊಳಿ ಇತರರಿದ್ದರು.