ತಹಸೀಲ್ದಾರ್ ಪ್ರಕಾಶ ಗಾಯಕವಾಡ ಮಾತನಾಡಿದರು. ಜಿ.ಬಿ.ರಂಗನಗೌಡ್ರ, ನಾಗಪ್ಪ ಸಂಗೊಳ್ಳಿ, ಬಸವರಾಜ ಕುಂಬಾರ ಇತರರಿದ್ದರು. 
ಬೆಳಗಾವಿ

ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಿ

ರಾಮದುರ್ಗ:
ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಐಆರ್‌ನಿಂದ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಈ ವೇಳೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದರು.
ತಾಲೂಕಿನಲ್ಲಿ 251 ಮತಗಟ್ಟೆಗಳಿದ್ದು, ಸುಮಾರು 2.11 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಬಿಎಲ್‌ಒಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊಡಲಾದ ಸಕ್ರಿಯಗೊಳಿಸುವಿಕೆ ಫಾರ್ಮ್ ಭರ್ತಿ ಮಾಡಿ ಕಡ್ಡಾಯವಾಗಿ ಬೂತ್‌ಮಟ್ಟದ ಅಧಿಕಾರಿಗಳ ಕೈಗೆ ಕೊಟ್ಟು, ಸ್ವೀಕತಿ ಪಡೆದುಕೊಳ್ಳಬೇಕೆಂದರು.
ಆ.5ರಂದು ಕರಡು ಮತದಾರ ಪಟ್ಟಿ ಸಿದ್ದಗೊಳಿಸಲು ಅಂತಿಮ ದಿನವಾಗಿದ್ದು, ಮತದಾರರ ಹೆಸರು ಸೇರ್ಪಡೆ, ಹೆಸರು ತೆಗೆಯುವಿಕೆ ಹಾಗೂ ವಿಳಾಸ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಮತಗಟ್ಟೆಯಲ್ಲಿ 1,200ಕ್ಕೂ ಅಧಿಕ ಮತದಾರರಿದ್ದಲ್ಲಿ ಹೆಚ್ಚುವರಿ ಮತಗಟ್ಟೆ ತೆರೆಯಲು ಅವಕಾಶವಿದೆ. ಸೆಪ್ಟೆಂಬರ್ 7ರಂದು ಅಂತಿಮ ಮತದಾರರ ಪಟ್ಟಿ ಸಿದ್ದಪಡಿಸಲಾಗುವುದು ಎಂದರು.