ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿರುವ ಚಿನ್ನಾಭರಣ, ನಗದು ರೂ. 
ಬೆಳಗಾವಿ

ಎಇಇ ಮನೆಯಲ್ಲಿ 14ಕೋಟಿ ರೂ.ಗಿಂತ ಆಸ್ತಿ ಪತ್ತೆ

ಬೆಳಗಾವಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಎ.ಬಿ. ರಜಪೂತ ನಿವಾಸ, ಕಚೇರಿ ಸೇರಿ 7 ಸ್ಥಳದ ಮೇಲೆ ಮಂಗಳವಾರ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಶುಕ್ರವಾರ ಮೂರನೇ 14ಕೋಟಿ ರೂ.ಗಿಂತ ಆಸ್ತಿ ಪತ್ತೆಯಾಗಿದೆ.
ಬೆಳಗಾವಿ ಮಹಾನಗರದಲ್ಲಿ 3ಮನೆ, ಸವದತ್ತಿ, ಹುಕ್ಕೇರಿ ಹಾಗೂ ಹುಬ್ಬಳ್ಳಿ ನಗರದಲ್ಲಿ ಐದು ನಿವೇಶನ, 5.960 ಕೆಜಿ ಚಿನ್ನ ಹಾಗೂ ವಜ್ರದ ಆಭರಣ, 5ಕೆಜಿಯ ಬೆಳ್ಳಿ ಆಭರಣ, ವಸ್ತುಗಳು, 3.12 ಕೋಟಿ ರೂ. ಬ್ಯಾಂಕ್ ಎಫ್‌ಡಿ, ಒಂದು ಕಾರು ಹಾಗೂ ಬೈಕ್ ಸೇರಿ 14 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆ. ಶೋಧನಾ ಕಾರ್ಯ ಮುಂದುವರಿದಿದೆ ಎಂದು ಲೋಕಾಯುಕ್ತ ಅಧೀಕ್ಷಕರು ತಿಳಿಸಿದ್ದಾರೆ.