ಕಾಗವಾಡ ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಎಐ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಡಾ.ಎಸ್.ಪಿ.ತಳವಾರ, ಪ್ರೊ.ಜೆ.ಕೆ. ಪಾಟೀಲ, ರಕ್ಷನಜಹಾನ್ ವಡ್ರಾಳೆ, ಪ್ರೊ.ಬಿ.ಎ.ಪಾಟೀಲ ಇತರರಿದ್ದರು.
ಕಾಗವಾಡ: ಕೃತಕ ಬುದ್ಧಿಮತ್ತೆ ಕಲಿಕೆ, ತಾಂತ್ರಿಕತೆ, ಗ್ರಹಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವಂತಹ ಮಾನವ ಬುದ್ಧಿಮತ್ತೆಯೊಂದಿಗೆ ಕೆಲಸ ಮಾಡುವ ಕೃತಕ ವ್ಯವಸ್ಥೆ ಆಗಿದೆ ಎಂದು ಪ್ರಾಚಾರ್ಯ ಡಾ.ಎಸ್.ಪಿ.ತಳವಾರ ತಿಳಿಸಿದ್ದಾರೆ.
ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಗಣಕಯಂತ್ರ ವಿಭಾಗ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಿದ್ಯಾರ್ಥಿ ವಿಚಾರ ಸಂಕಿರಣದಲ್ಲಿ ಮಾತನಾಡಿ, ವೇಗವಾಗಿ ಸಾಗುತ್ತಿರುವ ವಿಜ್ಞಾನದೊಂದಿಗೆ ನಾವೂ ಸಾಗಬೇಕು. ಈಚೆಗೆ ದೆಹಲಿಯಲ್ಲಿ ಆಯೋಜಿಸಿದ್ದ ಎಐ ಸಮ್ಮಿಟ್-2026 ಕುರಿತು ತಿಳಿದುಕೊಳ್ಳಲು ಈ ಸ್ಪರ್ಧೆ ಸಹಕಾರಿಯಾಗಲಿದೆ. ಭಾರತವನ್ನು ಕೇವಲ ಎಐ ಬಳಕೆದಾರರ ದೇಶವನ್ನಾಗಿಸಿದೇ ಜಾಗತಿಕ ಎಐ ನಾಯಕನಾಗಿ ಹೊರಹೊಮ್ಮಿಸುವ ಗುರಿಯನ್ನು ಈ ಎಐ ಸಮ್ಮಿಟ್ ಹೊಂದಿದೆ ಎಂದರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ.ಜೆ.ಕೆ.ಪಾಟೀಲ ಮಾತನಾಡಿದರು. ವಿವಿಧ ಮಹಾವಿದ್ಯಾಲಯದಿಂದ ಒಟ್ಟು 25 ವಿದ್ಯಾರ್ಥಿಗಳು ಅಭಿಪ್ರಾಯ ಮಂಡಿಸಿದರು.
ಚಿಕ್ಕೋಡಿ ಬಿ.ಕೆ. ಮಹಾವಿದ್ಯಾಲಯದ ರಕ್ಷನಜಹಾನ್ ವಡ್ರಾಳೆ ಪ್ರಥಮ ಸ್ಥಾನ, ಶಿವಾನಂದ ಮಹಾವಿದ್ಯಾಲಯದ ಮಹೇಕ ಅಪರಾಜ ದ್ವಿತೀಯ ಸ್ಥಾನ
ಮತ್ತು ಅಥಣಿಯ ಎಸ್‌ಎಂಎಸ್ ಮಹಾವಿದ್ಯಾಲಯದ ಭವಾನಿ ಪಾಟೀಲ, ತೃತೀಯ ಸ್ಥಾನ ಪಡೆದರು.
ಆಡಳಿತ ಮಂಡಳಿ ಕಾರ್ಯದರ್ಶಿ ಪ್ರೊ.ಬಿ.ಎ.ಪಾಟೀಲ, ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಡಿ.ಧಾಮಣ್ಣವರ, ಪ್ರೊ.ಎಸ್.ಎ.ಇನಾಮದಾರ ಇತರರಿದ್ದರು. ಅನನ್ಯಾ ಕುಲಕರ್ಣಿ ಪ್ರಾರ್ಥಿಸಿದರು. ಪ್ರೊ.ವಿ.ಬಿ.ಬುರ್ಲೆ ಸ್ವಾಗತಿಸಿದರು.
ಪ್ರೊ.ಎಸ್.ಎಸ್.ಡತರೆ ನಿರೂಪಿಸಿದರು. ಪ್ರೊ.ಎಸ್.ಡಿ.ಅಲಗೌಡರ ವಂದಿಸಿದರು.