ಕಳ್ಳಿಯರ ಬಂಧನ 
ಬೆಳಗಾವಿ

ಅಂತಾರಾಜ್ಯ ಕಳ್ಳಿಯರ ಬಂಧನ

ಧರ್ಮರಾಜ ರಾಮನಗೌಡ ಪಾಟೀಲ
ಅಥಣಿ ಗ್ರಾಮೀಣ: ಅಂತಾರಾಜ್ಯ ಇಬ್ಬರು ಕಳ್ಳಿಯರನ್ನು ಅಥಣಿ ಪೊಲೀಸರು ಶನಿವಾರ ಬಂಧಿಸಿ, 6.80 ಲಕ್ಷ ರೂ. ಮೊತ್ತದ 42.5 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಾಜಾರಾಮಪುರಿ ಟಾಕಳಿ ನಾಕಾ ಮಾಳಿ ಕಾಲನಿಯ ಹೇಮಾ ಧರ್ಮೇಂದ್ರ ಕಸಬೇಕರ ಹಾಗೂ ನೀಲಂ ವಿಜಯ ಕಾಂಬಳೆ ಬಂಧಿತರು.
ಅಥಣಿ ತಾಲೂಕಿನ ನಂದಗಾಂವ ಗ್ರಾಮದ ಪುತಳವ್ವ ಕಾಂಬಳೆ ಮಾ.24ರಂದು ಅಥಣಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಇವರ ಕೊರಳಲ್ಲಿದ್ದ 50 ಸಾವಿರ ರೂ. ಮೌಲ್ಯದ  7 ಗ್ರಾಂ ಬಂಗಾರದ ಬೋರಮಾಳ ಕಳವು ಮಾಡಿದ್ದ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
ಎಸ್ಪಿ ಕೆ.ರಾಮರಾಜನ್, ಹೆಚ್ಚುವರಿ ಎಸ್‌ಪಿ ಆರ್.ಬಿ. ಬಸರಗಿ ಹಾಗೂ ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ ಹಳ್ಳೂರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ಕಳ್ಳತನ ಮಾಡಿದ್ದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಗ್ರಾಮದ ಹಾಲಿ ಬಾವನಸೌಂದತ್ತಿ ನಿವಾಸಿ ಶಿವಾನಿ ಅನಿಲ ಮುಚ್ಚಂಡಿ(21)ರಾಯಬಾಗ ಪೊಲೀಸರು ಬಂಧಿಸಿ, 5.25 ಲಕ್ಷ ರೂ.ಮೌಲ್ಯದ 36.31 ಗ್ರಾಂ ಚಿನ್ನದ ಮಾಂಗಲ್ಯ ಸರ ಜಪ್ತಿ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ರಾಯಬಾಗ ಠಾಣೆ ಪೊಲೀಸರು ತಿಳಿಸಿದ್ದಾರೆ.