ಅಥಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಒಕ್ಕೂಟದಿಂದ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಿ, ಮನವಿ ಸಲ್ಲಿಸಲಾಯಿತು. ಪಿ.ಎಲ್.ಪೂಜಾರಿ, ಶ್ರೀಶೈಲ ದೇವರೆಡ್ಡಿ, ಆರ್.ಎಸ್.ದೊಡ್ಡನಿಂಗಪ್ಪಗೋಳ, ವಿಜಯ ಕಾಂಬಳೆ, ಮಂಜುಳಾ ಇತರರಿದ್ದರು.
- ಸಚಿವ ಲಕ್ಷ್ಮಣ ಸವದಿಗೆ ಮನವಿ
- ನ್ಯಾಯ ಒದಗಿಸಲು ಆಗ್ರಹ
ಅಥಣಿ: ಅತಿಥಿ ಉಪನ್ಯಾಸಕರ ದೀರ್ಘಕಾಲದ ಸಮಸ್ಯೆಗಳನ್ನು ಬಗೆಹರಿಸಿ, ಸೇವೆಯನ್ನು ಕೂಡಲೇ ಕಾಯಂಗೊಳಿಸಬೇಕೆಂದು ಒತ್ತಾಯಿಸಿ ಅಥಣಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕರ ಒಕ್ಕೂಟದಿಂದ ಸಹಕಾರ ಸಚಿವ ಲಕ್ಷ್ಮಣ ಸವದಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಸಚಿವರು ಮಾತನಾಡಿ, ಅತಿಥಿ ಉಪನ್ಯಾಸಕರ ಸಂಕಷ್ಟಗಳ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನ್ಯಾಯ ಒದಗಿಸುವ ಭರವಸೆ ನೀಡಿದರು.
ಒಕ್ಕೂಟದ ಪ್ರಮುಖ ಪ್ರೊ.ಪಿ.ಎಲ್. ಪೂಜಾರಿ ಮಾತನಾಡಿ, ರಾಜ್ಯದಲ್ಲಿ ೪೩೦ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ೨೦ಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ನಿವೃತ್ತಿಗೆ ಬಂದಿದ್ದರೂ ಯಾವುದೇ ಭದ್ರತೆ ಇಲ್ಲ. ಸರ್ಕಾರ ಮಾನವೀಯ ದೃಷ್ಟಿಯಿಂದ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರ ಒಕ್ಕೂಟದ ಸದಸ್ಯರಾದ ಶ್ರೀಶೈಲ ದೇವರೆಡ್ಡಿ, ಬಿ.ಆರ್.ಮುಗ್ಗನವರ,
ಡಾ.ಆರ್.ಎಸ್.ದೊಡ್ಡನಿಂಗಪ್ಪಗೋಳ, ಡಾ.ವಿಜಯ ಕಾಂಬಳೆ, ಡಾ.ರಾಜೇಂದ್ರ ಗೊಂಧಳೆ, ಡಾ.ಅಪ್ಪು ಮಾದರ, ಶಿವಾನಂದ ಮಟ್ಟೇಪ್ಪನವರ,
ಎನ್.ಎನ್.ನೂಲಿ, ಬಿ.ಎಸ್.ಪಾಟೀಲ, ಆರ್.ಎಸ್.ಗೌರಿ, ಮಂಜುಳಾ ಹಳ್ಳೊಳ್ಳಿ, ಡಾ.ಪದ್ಮಶ್ರೀ, ಜ್ಯೋತಿ ಕೆಂಚಣ್ಣವರ ಇತರರಿದ್ದರು.