ಬೋರಗಾಂವ ಅರಿಹಂತ ಸಂಸ್ಥೆಯ 36ನೇ ವಾರ್ಷಿಕ ಮಹಾಸಭೆಯಲ್ಲಿ ಕೊಗನೋಳಿ ಶಾಖೆಗೆ ಅತ್ಯುತ್ತಮ ಶಾಖೆ ಪ್ರಶಸ್ತಿ ನೀಡಲಾಯಿತು. ಅಭಿನಂದನ ಪಾಟೀಲ, ಉತ್ತಮ ಪಾಟೀಲ, ಸತೀಶ ಪಾಟೀಲ, ಅಶೋಕ ಬಂಕಾಪುರೆ, ಮಹಾವೀರ ಕಾತ್ರಾಳೆ, ವೀರಕುಮಾರ ಪಾಟೀಲ, ದಿಗಂಬರ ಕಾಂಬಳೆ ಇದ್ದಾರೆ. 
ಬೆಳಗಾವಿ

ಅರಿಹಂತ ಕ್ರೆಡಿಟ್ ಸೊಸೈಟಿಗೆ 18.32 ಕೋಟಿ ರೂ. ಲಾಭ

: ದಿ.ರಾವಸಾಹೇಬ ಪಾಟೀಲ ಆಶಯದಂತೆ ಅರಿಹಂತ ಸಂಸ್ಥೆ ರೈತರ

ಹಿತಾಸಕ್ತಿ, ಸದಸ್ಯರ ಪ್ರಗತಿಗೆ ಶ್ರಮಿಸುತ್ತಿದೆ. ಸಮಾಜದ ಅಭಿವೃದ್ಧಿ ಅರಿಹಂತ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಅರಿಹಂತ ಕೋ-ಆಪ್ ಕ್ರೆಡಿಟ್ ಸಂಸ್ಥೆ ಅಧ್ಯಕ್ಷ ಅಭಿನಂದನ ಪಾಟೀಲ ಹೇಳಿದರು.

ಪಟ್ಟಣದ ಅರಿಹಂತ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅರಿಹಂತ ಸಂಸ್ಥೆಯ 36ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸೊಸೈಟಿ 23,342 ಸದಸ್ಯರನ್ನು ಹೊಂದಿದ್ದು, 7.1 ಕೋಟಿ ರೂ. ಷೇರು ಬಂಡವಾಳ, 111.95 ಕೋಟಿ ರೂ. ನಿಧಿಗಳು, 1,726.17 ಕೋಟಿ ರೂ. ಠೇವಣಿ ಹೊಂದಿದೆ. ಪ್ರಸಕ್ತ ವರ್ಷ 268.10 ಕೋಟಿ ರೂ. ಠೇವಣಿ ಹೆಚ್ಚಳವಾಗಿದೆ. 3.88 ಕೋಟಿ ರೂ. ಹೂಡಿಕೆ ಮತ್ತು 1,255.99 ಕೋಟಿ ರೂ. ಸಾಲ ವಿತರಿಸಿ, 18.32 ಕೋಟಿ ರೂ. ಲಾಭ ಗಳಿಸಿದೆ ಎಂದರು.
ಯುವ ಮುಖಂಡ ಉತ್ತಮ ಪಾಟೀಲ ಮಾತನಾಡಿ, ಸಹಕಾರ ವಲಯದ ಜತೆಗೆ ಅರಿಹಂತ ಪರಿವಾರ ಸಕ್ಕರೆ, ಆರೋಗ್ಯ, ಶಿಕ್ಷಣ, ಜವಳಿ ಉದ್ಯಮ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ. ಬೆಳಗಾವಿಯಲ್ಲಿರುವ ಅರಿಹಂತ ಆಸ್ಪತ್ರೆಯನ್ನು 200 ಹಾಸಿಗೆಗಳ ಆಸ್ಪತ್ರೆಯಾಗಿ, ಅರಿಹಂತ ಸಕ್ಕರೆ ಕಾರ್ಖಾನೆ, ಅರಿಹಂತ ಜವಳಿ ಕಾರ್ಖಾನೆ ಉನ್ನತೀಕರಣಕ್ಕೆ ಕ್ರಮವಹಿಸಲಾಗಿದೆ. ಶೀಘ್ರ ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜು ಆರಂಭಿಸಲಾಗುವುದು ಎಂದರು.
ಅತ್ಯುತ್ತಮ ಶಾಖೆಯಾಗಿ ಕೊಗನೋಳಿ, ಆದರ್ಶ ಅಧಿಕಾರಿಯಾಗಿ ಜಿನದತ್ತ ವಡೇರ ಹಾಗೂ ಆದರ್ಶ ಸಿಬ್ಬಂದಿಯಾಗಿ ಅರುಣ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಸಿಇಒ ಅಶೋಕ ಬಂಕಾಪುರೆ ಅಂದಾಜು ಪತ್ರಿಕೆ ಮಂಜೂರಾತಿ ಪಡೆದರು. ಮಾಜಿ ಸಚಿವ ವೀರಕುಮಾರ ಪಾಟೀಲ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಇಂದ್ರಜಿತ ಪಾಟೀಲ, ಚೇತನ ಪಾಟೀಲ, ದಿಗಂಬರ ಕಾಂಬಳೆ, ಅಶೋಕ ಪಾಟೀಲ, ಮಹಾವೀರ ಕಾತ್ರಾಳೆ, ಸುದರ್ಶನ ಖೋತ, ಅರುಣ ನಿಕಾಡೆ, ಡಾ.ಶಂಕರ ಮಾಳಿ, ಹೃಷಿಕೇಶ ಅಲಾಸೆ, ಆನಂದಕುಮಾರ ಮಗದುಮ್ಮ, ಸಂಸ್ಥೆ ಉಪಾಧ್ಯಕ್ಷ ಸತೀಶ ಪಾಟೀಲ, ಸುಭಾಸ ಶೆಟ್ಟಿ, ಜಯಪಾಲ ನಾಗಾವೆ, ಪ್ರಹ್ಲಾದ ಕಡೋಲೆ, ಪಿರಗೊಂಡ ಪಾಟೀಲ, ಭುಜಗೊಂಡ ಪಾಟೀಲ, ಶರದ ಲಡಗೆ, ಬಾಬಾಸಾಹೇಬ ಅಫ್ರಾಜ್, ಶ್ರೀಕಾಂತ ವಾಸವಾಡೆ, ಸಂದೀಪ ಪಾಟೀಲ, ಶಿವಾನಂದ ರಾಜಮಾನೆ, ನಿರ್ಮಲಾ ಬಳ್ಳೊಳೆ, ಅನಿತಾ ಮಗದುಮ್ಮ, ಅಜಿತ ಕಾಂಬಳೆ, ಸಿಇಒ ಅಶೋಕ ಬಂಕಾಪುರೆ ಇತರರಿದ್ದರು.