ಬೋರಗಾಂವ ಅರಿಹಂತ ಕ್ರೆಡಿಟ್ ಸೊಸೈಟಿ ನಿರ್ದೇಶಕರಾಗಿ ಆಯ್ಕೆಯಾದ ಉತ್ತಮ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಆರ್.ಟಿ.ಚೌಗುಲಾ, ಸುಮಿತ ರೊಡ್ಡ, ನಿರ್ದೇಶಕ ರಾಜೇಂದ್ರ ಐದಮಾಲೆ, ದರ್ಶನ ಪಾಟೀಲ, ರಾಕೇಶ್ ಪಿರಗಣ್ಣವರ ಇತರರಿದ್ದರು. 
ಬೆಳಗಾವಿ

ಅರಿಹಂತ ಕ್ರೆಡಿಟ್ ಸೊಸೈಟಿ ನಿರ್ದೇಶಕರಾಗಿ ಉತ್ತಮ ಆಯ್ಕೆ

ಬೋರಗಾಂವ: ಪಟ್ಟಣದ ಶ್ರೀ ಅರಿಹಂತ ಕ್ರೆಡಿಟ್ ಸೊಸೈಟಿ ನಿರ್ದೇಶಕರಾಗಿ ಸಹಕಾರ ರತ್ನ ಉತ್ತಮ ಪಾಟೀಲ ಅವರನ್ನು ಶನಿವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಎಲ್ಲ ನಿರ್ದೇಶಕರ ಮಂಡಳಿ ಸರ್ವಾನುಮತದಿಂದ ಉತ್ತಮ ಪಾಟೀಲ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ ಎಂದು ಸೊಸೈಟಿ ಉಪಾಧ್ಯಕ್ಷ ಸತೀಶ ಪಾಟೀಲ ಹೇಳಿದರು.
ಉತ್ತಮ ಪಾಟೀಲ ಅವರು ಸಹಕಾರ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಸಹಕಾರ, ಕಷಿ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಅವರ ನಾಯಕತ್ವ ಗುಣಗಳು ಮತ್ತು ದೂರದಷ್ಟಿಯಿಂದಾಗಿ, ಬ್ಯಾಂಕಿನ ಕಾರ್ಯ ಮತ್ತಷ್ಟು ಹೆಚ್ಚಲಿದೆ.ಸಂಸ್ಥೆಯ ಅಧ್ಯಕ್ಷ ಅಭಿನಂದನ ಪಾಟೀಲ, ಉಪಾಧ್ಯಕ್ಷ ಸತೀಶ ಪಾಟೀಲ, ಸಿಇಒ ಅಶೋಕ ಬಂಕಾಪುರೆ, ಪಿಕೆಪಿಎಸ್ ಸಿಇಒ ಆರ್.ಟಿ.ಚೌಗುಲಾ, ಪದಾಧಿಕಾರಿಗಳು ಇದ್ದರು.