ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಹಾರಾಷ್ಟ್ರ ಕನ್ನಡ ಹೋರಾಟಗರು ಮತ್ತು ಬೆಳಗಾವಿ ಕನ್ನಡ ಪರ ಸಂಘಟನೆ ಮುಖಂಡರ ಸಭ ನಡೆಯಿತು. ಅಶೋಕ ಚಂದರಗಿ, ವಿಕ್ರಂ ಸಾವಂತಿ, ಮಹಾದೇವ ತಳವಾರ ಇತರರಿದ್ದರು. 
ಬೆಳಗಾವಿ

ಮಹಾ ಕನ್ನಡಿಗರಿಗಾಗಿ ಏಪ್ರೀಲ್ ಉನ್ನತ ಸಭೆ

ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಮಕ್ಕಳಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಗಡಿ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಜತೆ ಸಭೆ ಕರೆಯಲು ಕನ್ನಡ ಪರ ಸಂಘಟನೆಗಳು ಒತ್ತಾಯ.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕನ್ನಡ ಪರ ಸಂಘಟನೆ ಮುಖಂಡರು, ಮಹಾರಾಷ್ಟ್ರದ ಜತ್ತ ಮಾಜಿ ಶಾಸಕ ವಿಕ್ರಂ ಸಾವಂತ, ಹೋರಾಟಗಾರರ ಜತೆ ನಡೆದ ಸಭೆಯಲ್ಲಿ ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹಲವು ನಿರ್ಣಯ ಕೈಗೊಂಡರು.
ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ಮಾತನಾಡಿ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ನಡುವಣ ನೀರು ವಿನಿಮಯ ಒಪ್ಪಂದ, ಸಾರಿಗೆ ವ್ಯವಸ್ಥೆ ಸುಧಾರಣೆ , ಮಹಾರಾಷ್ಟ್ರದ ಜತ್ತ ತಾಲೂಕಿನ 44 ಗ್ರಾಮಗಳಲ್ಲಿ ಅಪ್ಪಟ ಕನ್ನಡಗರಿದ್ದು, ಅವರ ಬೇಡಿಕೆಗಳ ಈಡೇರಿಕೆಗಾಗಿ ಮಾಜಿ ಶಾಸಕ ವಿಕ್ರಂ ಸಾವಂತ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏಪ್ರೀನಲ್ ಗಡಿ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ಉನ್ನತ ಮಟ್ಟದ ಅಧಿಕಾರಿ ಸಭೆ ಕರೆದು ಚರ್ಚಿಸಲು ಒತ್ತಡ ಹಾಕಲು ನಿರ್ಧರಿಸಲಾಗಿದೆ ಎಂದರು.
ಮಾಜಿ ಶಾಸಕ ವಿಕ್ರಂ ಸಾವಂತ ಮಾತನಾಡಿ, ಕರ್ನಾಟದಲ್ಲಿರುವ ಮರಾಠಿ ಭಾಷಿಕರಿಗೆ ಮಹಾರಾಷ್ಟ್ರ ಸರ್ಕಾರ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಿದೆ. ಅದೇ ಮಾದರಿಯಲ್ಲಿ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ಕೂಡ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಗಡಿ ಭಾಗದ ಹಳ್ಳಿಗಳಿಗೆ ಸಾರಿಗೆ, ರಸ್ತೆ ಸೌಲಭ್ಯ ಹಾಗೂ ಸರ್ಕಾರದ ವಿವಿಧ ಯೋಜನೆಗಳನ್ನು ಗಡಿ ಕನ್ನಡಿಗರಿಗೆ ನೀಡಬೇಕು ಎಂದು ಒತ್ತಾಯಿಸಿಕೊಂಡು ಬರಲಾಗುತ್ತಿದೆ ಎಂದರು.
ಜತ್ತ ಕನ್ನಡ ಹೋರಾಟಗಾರರಾದ ವಾಹಬ್ ಮುಲ್ಲಾ,ಮಲಿಕ್ ಜಾನ್, ಕನ್ನಡ ಹೋರಾಟಗಾರದ ಮಹಾದೇವ ತಳವಾರ, ವಾಜಿದ ಹಿರೇಕೋಡಿ, ಬಲರಾಮ ಮಾಸೇನಟ್ಟಿ, ಸಾಗರ ಬೋರಗಲ್ ಇತರರಿದ್ದರು.