ಕನ್ಹೇರಿ ಶ್ರೀಗಳಿಗೆ ಬಸವ ಕಲ್ಯಾಣ ಪ್ರವೇಶ ರ್ನಿಬಂಧಕ್ಕೆ ಒತ್ತಾಯಿಸಿ ಕೊಪ್ಪಳದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಪದಾಧಿಕಾರಿಗಳು ಸೋಮವಾರ ಡಿಸಿ ಡಾ.ಸುರೇಶ ಬಿ.ಇಟ್ನಾಳಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಬಸವರಾಜ ಬಳ್ಳೊಳ್ಳಿ, ಹನುಮೇಶ ಕಲ್ಮಂಗಿ, ರಾಜೇಶ ಸಸಿಮಠ, ಶರಣಬಸವನಗೌಡ ಪಾಟೀಲ್, ಶೇಖರ ಇಂಗಳದಾಳ ಇದ್ದರು.
- ಜಾಗತಿಕ ಲಿಂಗಾಯತ ಮಹಾಸಭಾದಿಂದ ಮನವಿ
ಕೊಪ್ಪಳ : ಲಿಂಗಾಯತ ಮಠಾಧೀಶರನ್ನು ನಿಂದಿಸಿದ ಕನ್ಹೇರಿ ಶ್ರೀ ಕಾಡಸಿದ್ದೇಶ್ವರ ಶ್ರೀಗಳು ಬೀದರ್ನ ಬಸವಕಲ್ಯಾಣದಲ್ಲಿ ಜೂ.28ರಂದು ಹಮ್ಮಿಕೊಂಡಿರುವ ಸಮಾವೇಶಕ್ಕೆ ಆಗಮಿಸುವುದನ್ನು ತಡೆಯುವಂತೆ ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಪದಾಧಿಕಾರಿಗಳು ಸೋಮವಾರ ಡಿಸಿ ಡಾ.ಸುರೇಶ ಬಿ.ಇಟ್ನಾಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬಸವ ಸಂಸತಿ, ಲಿಂಗಾಯ ಮಠಾಧೀಶರನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ. ಹೈಕೋರ್ಟ್, ಸುಪ್ರೀ ಕೋರ್ಟ್ ಉತ್ತಮ ಪ್ರಜೆ ಅಲ್ಲವೆಂದು ಛೀಮಾರಿ ಹಾಕಿವೆ. ಬಸವ ತತ್ವ ತಿರುಚುವ, ಲಿಂಗಾಯತ ಧರ್ಮ ಕಲುಷಿತ ಮಾಡುವ ಕೆಲಸ ಮಾಡುತ್ತಿದ್ದಾರೆ. ಲಿಂಗಾಯರ ಪವಿತ್ರ ಧರ್ಮ ಕ್ಷೇತ್ರ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಜೂ.28ರಂದು ಬಸವಾದಿ ಶರಣರ ಹಿಂದೂ ಸಮಾವೇಶ ಹೆಸರಿನಲ್ಲಿ ಬಸವತತ್ವ ತಿರುಚಲು ಮುಂದಾಗಿದ್ದಾರೆಂದು ತಿಳಿಸಿದರು.
ಶಾಂತಿಭಂಗ ಮಾಡುವ, ಕೋಮು ಗಲಭೆ ಸೃಷ್ಟಿಸುವವರನ್ನು ಪ್ರೋತ್ಸಾಹಿಸಬಾರದು. ಸ್ವಾಮೀಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಜು. ಸಮಾವೇಶಕ್ಕೆ ಅವಕಾಶ ನೀಡಬಾರದು. ಸ್ವಾಮೀಜಿ ಬಸವ ಕಲ್ಯಾಣ ಪ್ರವೇಶಿಸದಂತೆ ರ್ನಿಬಂಧ ಹೇರಬೇಕೆಂದು ಒತ್ತಾಯಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ಜಿಲ್ಲಾ ಪ್ರ.ಕಾ. ರಾಜೇಶ ಸಸಿಮಠ, ತಾಲೂಕು ಪ್ರ.ಕಾ. ಶರಣಬಸವನಗೌಡ ಪಾಟೀಲ್, ಯುವ ಘಟಕ ಅಧ್ಯಕ್ಷ ಶೇಖರ ಇಂಗಳದಾಳ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ವೀರಭದ್ರಪ್ಪ ನಂದ್ಯಾಳ, ಕಾರ್ಯದರ್ಶಿ ಬಾಪುಗೌಡ ಪಾಟೀಲ್, ಮುಖ್ಯಸ್ಥರಾದ ಜಿ.ದೇವೀಶಪ್ಪ ಇತರರಿದ್ದರು.