ಅಥಣಿ ಪಟ್ಟಣಕ್ಕೆ ಆಗಮಿಸಿದ ಎಸ್ಪಿ ಕೆ.ರಾಮರಾಜನ್ ಅವರಿಗೆ ಬಿಜೆಪಿ ಮಂಡಳದಿಂದ ಮನವಿ ಸಲ್ಲಿಸಲಾಯಿತು. ಮಹೇಶ ಕುಮಠಳ್ಳಿ, ಗಿರೀಶ ಬುಟಾಳೆ, ಸಂಪತಕುಮಾರ ಶೆಟ್ಟಿ, ಆನಂದ ಟೊನಪಿ, ಅಪ್ಪಾಸಾಬ ಅವತಾಡೆ ಇತರರಿದ್ದರು.
ಅಥಣಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಮಂಡಳ ವತಿಯಿಂದ ಎಸ್ಪಿ ಕೆ.ರಾಮರಾಜನ್ ಅವರಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಎಸ್ಪಿ ಕೆ.ರಾಮರಾಜನ್, ಪ್ರಧಾನಮಂತ್ರಿ ಅವರ ಬಗ್ಗೆ ಲಘುವಾಗಿ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಸರಿಯಲ್ಲ. ಅವರು ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಮಹೇಶ ಕುಮಠಳ್ಳಿ, ಬಿಜೆಪಿ ಮಂಡಳ ಅಧ್ಯಕ್ಷ ಗಿರೀಶ ಬುಟಾಳೆ, ಬಿಜೆಪಿ ಮುಖಂಡರಾದ ಸಂಪತಕುಮಾರ ಶೆಟ್ಟಿ, ಆನಂದ ಟೊನಪಿ, ಅಪ್ಪಾಸಾಬ ಅವತಾಡೆ, ಮುರುಗೇಶ ಐಗಳಿ, ದೀಪಕ ಪಾಟೀಲ, ಪುಟ್ಟು ಹಿರೇಮಠ, ಅಶೋಕ ದಾನಗೊಂಡ ಇತರರಿದ್ದರು.