ನಣದಿ ಗ್ರಾಮದ ಪಿಕೆಪಿಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಆರ್.ಬಿ.ಖಂಡಗಾವೆ ಮಾತನಾಡಿದರು. ಅಣ್ಣಾಸಾಹೇಬ ಇಂಗಳೆ, ವಿಜಯರಾಜ, ಸಚಿನ ಮೊಪಗಾರ ಇದ್ದರು.
ಮಾಂಜರಿ: ರೈತರಿಗೆ ಅನುಕೂಲ ಕಲ್ಪಿಸುವ ಮತ್ತು ಕಬ್ಬಿನ ಇಳುವರಿ ಹೆಚ್ಚಿಸುವ ಉದ್ದೇಶದಿಂದ ಕಾರ್ಖಾನೆ ರೂವಾರಿಗಳಾದ ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷ ಅಮಿತ ಕೋರೆ ಹಾಗೂ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಮಾರ್ಗದರ್ಶನದಲ್ಲಿ ಹೊಸ ಯೋಜನೆ ಜಾರಿಗೆ ತರುತ್ತಿದ್ದು, ಇದರ ಲಾಭ ಪಡೆದುಕೊಳ್ಳಬೇಕು ಎಂದು ಕಾರ್ಖಾನೆ ನಿರ್ದೇಶಕ ಅಣ್ಣಾಸಾಹೇಬ ಇಂಗಳೆ ಹೇಳಿದರು.
ಚಿಕ್ಕೋಡಿ ತಾಲೂಕಿನ ನಣದಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಭಾಂಗಣದಲ್ಲಿ ಚಿದಾನಂದ ಬಸಪ್ರಭು ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಬೆಂಗಳೂರಿನ ನ್ಯೂಟ್ರಿಕಾರ್ಪ್ ಅಗ್ರಿ ಪ್ರೈ.ಲಿ ಮತ್ತು ಜೈನ ಇರಿಗೇಷನ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕಬ್ಬಿನ ಬೆಳೆಯಲ್ಲಿ ಗೊಣ್ಣೆ ಹುಳುವಿನ (ಕೀಟ) ಸಮಗ್ರ ನಿರ್ವಹಣೆ, ಕಬ್ಬಿನ ಇಳುವರಿ ಹೆಚ್ಚಿಸಲು ಆಧುನಿಕ ಬೇಸಾಯ ಕ್ರಮ ಹಾಗೂ ಕಬ್ಬಿನ ಬೆಳೆಯಲ್ಲಿ ಹನಿ ನೀರಾವರಿ ಮಹತ್ವ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಅತಿಥಿ ಉಪನ್ಯಾಸಕರಾಗಿ ನ್ಯೂಟ್ರಿಕಾರ್ಪ್ ಅಗ್ರಿಯ ಕ್ಷೇತ್ರಾಧಿಕಾರಿ ವಿಜಯರಾಜ ಜೈನ, ಇರಿಗೇಷನ್ ಬೇಸಾಯ ತಜ್ಞ ಸುರೇಶ ಮಗದುಮ್ಮ ಮತ್ತು ತಾಂತ್ರಿಕ ವಿಭಾಗದ ಪ್ರಶಾಂತ ಪಾಟೀಲ ಮಾತನಾಡಿ, ಕಬ್ಬಿನ ಇಳುವರಿ ಹೆಚ್ಚಿಸಲು ಆಧುನಿಕ ಬೇಸಾಯ ಕ್ರಮ ಹಾಗೂ ಕಬ್ಬಿನ ಬೆಳೆಯಲ್ಲಿ ಹನಿ ನೀರಾವರಿ ಮಹತ್ವ ಮತ್ತು ಸುಧಾರಿತ ಹೊಸ ಕಬ್ಬಿನ ತಳಿಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಖಾನೆ ಪ್ರಭಾರ ಕಬ್ಬು ಅಭಿವೃದ್ಧಿ ಅಧಿಕಾರಿ ಸಚಿನ ಮೊಪಗಾರ ಕಬ್ಬಿನ ಬೆಳೆಯಲ್ಲಿ ಗೊಣ್ಣೆ ಹುಳುವಿನ ಸಮಗ್ರ ಹತೋಟಿ
ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ವಿಜಯಸಿಂಹ ನಿಂಬಾಳಕರದೇಸಾಯಿ, ಕಾರ್ಖಾನೆ ಹಿರಿಯ ಪ್ರಧಾನ ವ್ಯವಸ್ಥಾಪಕ ಎನ್.ಎಸ್.ಹಿರೇಮಠ, ವ್ಯವಸ್ಥಾಪಕ ನಿರ್ದೇಶಕ ಆರ್.ಬಿ.ಖಂಡಗಾವೆ ಮಾತನಾಡಿದರು.
ಕಾರ್ಖಾನೆ ಆಡಳಿತ ಮಂಡಳಿ ಸದಸ್ಯ ಮಲ್ಲಪ್ಪ ಮೈಶಾಳೆ, ಸಂಪತ್ ತೋರಾತ, ರಾಮಚಂದ್ರ ಮಡಿವಾಳೆ, ವಿಲಾಸ ಚೌಹಾಣ, ವಿಜಯ ಕೋಕಣೆ, ಕೃಷ್ಣಾ ಕೋಕಣೆ, ಕಾರ್ಖಾನೆ ಅಧಿಕಾರಿಗಳಾದ ರಾಹುಲ ಇಚಲಕರಂಜಿ, ಕಿಸಾನ್ ಬಜಾರ್ ವ್ಯವಸ್ಥಾಪಕ ರಾಹುಲ ಬಸ್ತವಾಡೆ, ಎಸ್.ಡಿ.ಪಾಟೀಲ, ಎಸ್.ಎಸ್.ಖೋತ, ಆರ್.ಎ.ಭೀವಸೆ. ಎಂ.ಎಸ್.ಪಾಟೀಲ ಇತರರಿದ್ದರು.