ಅನ್ನಪೂರ್ಣೇಶ್ವರಿ ದೇವಿ 
ಬೆಳಗಾವಿ

ಅನ್ನಪೂಣೇಶ್ವರಿ ವರ್ಷಾವಧಿ ಉತ್ಸವ ಶುಕ್ರವಾರದಿಂದ

ಬೆಳಗಾವಿ: ವಡಗಾವಿ ಯಳ್ಳೂರು ರಸ್ತೆಯ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ ಮೇ 22 ರಿಂದ 24ರವರೆಗೆ ವರ್ಷಾವಧಿ ಉತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
ಉಡುಪಿ ಉಚ್ಚಿಲದ ಶ್ರೀ ವಿಶ್ವನಾಥ ಜೋಯಿಸರ ನೇತೃತ್ವದಲ್ಲಿ ನಡೆಯುವ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಶುಕ್ರವಾರ (ಮೇ 22) ಸಂಜೆ 6ಕ್ಕೆ ಪ್ರಾರ್ಥನೆ, ವಾಸ್ತು ಶುದ್ದಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ, 7ಕ್ಕೆ ವಾಸ್ತು ಬಲಿ, ಸುದರ್ಶನ ಹೋಮ, ಮೇ 23ರಂದು ಬೆಳಗ್ಗೆ 6ಕ್ಕೆ ಅನ್ನಪೂರ್ಣೇಶ್ವರಿ ದೇವಿ ಹಾಗೂ ಪರಿವಾರ ದೇವರಿಗೆ ಕಲಶಾಭಿಷೇಕ, ಪೂಣ್ಯಾಹವಾಚನ, ಗಣಹೋಮ, 8ಕ್ಕೆ ನವಗ್ರಹ ಹೋಮ, ಬೆಳಗ್ಗೆ 10ಕ್ಕೆ ಅನ್ನಪೂರ್ಣೇಶ್ವರಿ ಯಾಗ, ಮಹಾಪೂಜೆ, ಪ್ರಸನ್ನ ಪೂಜೆ, ಸಂಜೆ 4ಕ್ಕೆ ದೇವಿಯ ಪಲ್ಲಕಿ ಮೆರವಣಿಗೆ, ರಂಗ ಪೂಜೆ, ದೀಪೋತ್ಸವ ನಡೆಯಲಿದೆ.
ಮೇ 24 ರ ಬೆಳಗ್ಗೆ 7 ಗಂಟೆಗೆ ಸಂಪ್ರೋಕ್ಷಣೆ, ಸುಬ್ರಮಣ್ಯ ದೇವರಿಗೆ ಅಶ್ಲೇಷಾ ಬಲಿ ಪೂಜೆ, ಬೆಳಗ್ಗೆ 8.30ಕ್ಕೆ ಮಹಾಚಂಡಿಕಾ ಹೋಮ, ಮಧ್ಯಾಹ್ನ 12.30ರಿಂದ 3ರವರೆಗೆ ಮಹಾಪ್ರಸಾದ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.