ಬೋರಗಾಂವ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಯುವ ನಾಯಕ ಉತ್ತಮ ಪಾಟೀಲ, ದಿಗಂಬರ ಕಾಂಬಳೆ, ಅಭಯಕುಮಾರ ಮಗದುಮ್ಮ ಇತರರಿದ್ದರು.
ಬೋರಗಾಂವ: ಅಂಜನಿಪುತ್ರ ಹನುಮಂತ ಶಕ್ತಿ, ಭಕ್ತಿ ಮತ್ತು ನಿಷ್ಠೆಯ ಸಂಕೇತ. ಯುವಕರು ಹನುಮಂತನ ಭಕ್ತಿಯನ್ನು ಅನುಸರಿಸಬೇಕು ಎಂದು ಯುವ ನಾಯಿಕ ಉತ್ತಮ ಪಾಟೀಲ ಹೇಳಿದರು.
ಪಟ್ಟಣದ ವಡ್ಡರ ಸಮುದಾಯ ಆಯೋಜಿಸಿದ್ದ ಹನುಮಾನ ಜಯಂತಿಯಲ್ಲಿ ಮಾತನಾಡಿದ ಅವರು, ಶಿಕ್ಷಣ, ಶಿಸ್ತಿನಿಂದ ಸಮಾಜದ ಅಭಿವೃದ್ಧಿ ಸಾಧ್ಯ. ವಡ್ಡರ ಸಮುದಾಯದ ಅಭಿವೃದ್ಧಿಗೆ ಅರಿಹಂತ ಗ್ರೂಪ್ ಬದ್ಧವಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ದಿಗಂಬರ ಕಾಂಬಳೆ, ಸದಸ್ಯ ಅಭಯಕುಮಾರ ಮಗದುಮ್ಮ, ತುಳಸಿದಾಸ ವಾಸವಾಡೆ, ಸಂಗಪ್ಪ ಐದಮಾಳೆ, ಆಕಾಶ ವಡ್ಡರ, ಸುನಿಲ ವಡ್ಡರ, ಅವಿನಾಶ ವಡ್ಡರ, ಪ್ರಶಾಂತ ವಡ್ಡರ, ರೂಪೇಶ ವಡ್ಡರ, ರಾಜು ವಡ್ಡರ ಭಜರಂಗ ವಡ್ಡರ, ಸೌರಭ ವಡ್ಡರ, ಪ್ರಸಾದ ವಡ್ಡರ, ಧನಪಾಲ ವಡ್ಡರ, ಮನೋಜ ವಡ್ಡರ, ವಿಶ್ವಾಸ ವಡ್ಡರ ಇತರರಿದ್ದರು.