ಬಾಡಗಿಯಲ್ಲಿ ಹನುಮಾನ ಜಯಂತಿ ಅಂಗವಾಗಿ ತೊಟ್ಟಿಲೋತ್ಸವ ಜರುಗಿತು. ಸಿದ್ಧಲಿಂಗ ಸಾಧು ಮಹಾರಾಜರು, ಸಂಗಯ್ಯ ಸ್ವಾಮೀಜಿ, ಯಲ್ಲವ್ವ ಮಮದಾಪುರ, ಅಂಬಿಕಾ ಪೂಜಾರಿ ಇತರರಿದ್ದರು. 
ಬೆಳಗಾವಿ

ನಂಬಿದವರ ಕಾಮಧೇನು ಆಂಜನೇಯ

ಅರಟಾಳ: ತ್ರೇತಾಯುಗದಲ್ಲಿ ಶ್ರೀರಾಮನ ಭಕ್ತನಾದ ಹನುಮಂತ ಕಲಿಯುಗದಲ್ಲಿಯೂ ನಂಬಿದವರನ್ನು ಕಾಪಾಡುತ್ತಿರುವ ಕಾಮಧೇನು ಎಂದು ಬಾಡಗಿ ಸದ್ಗುರು ಸಿದಲಿಂಗ ಸಾಧು ಮಹಾರಾಜರು ಹೇಳಿದರು.
ಸಮೀಪದ ಬಾಡಗಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಗುರುವಾರ ಹನುಮಾನ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಚನ್ನಸಂಗಮೇಶ್ವರ ಶ್ರೀಮಠದಿಂದ ಅನ್ನ ಪ್ರಸಾದ ವ್ಯವಸ್ಥೆ ಜರುಗಿತು.
ಸಂಗಯ್ಯ ಸ್ವಾಮೀಜಿ, ಸಿದ್ರಾಮ ಪೂಜಾರಿ, ವಿಠ್ಠಲ ಮುಧೋಳ, ವಿಜಯ ಮಹಾರಾಜ, ಪ್ರಲ್ಹಾದ ಪಾಟೀಲ, ಸದಾಶಿವ ಉಮರಾಣಿ, ಚನ್ನಪ್ಪ ನೇಮಗೌಡ, ಯಲ್ಲವ್ವ ಮಮದಾಪುರ, ಅಂಬಿಕಾ ಪೂಜಾರಿ, ಸಾವಿತ್ರಿ ಹಿರೇಮಠ, ನೀಲವ್ವ ತೆಲಸಂಗ, ಮಹಾದೇವಿ ನೇಮಗೌಡ, ದ್ರೌಪದಿ ಮಮದಾಪುರ, ಲಕ್ಷ್ಮೀಬಾಯಿ ಮಮದಾಪುರ ಇತರರಿದ್ದರು.