ಕೊಕಟನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತೆರೆಬಂಡಿ ಸ್ಪರ್ಧೆ ಉದ್ಘಾಟನೆ ಸಮಾರಂಭದಲ್ಲಿ ಯುವ ಮುಖಂಡ ಚಿದಾನಂದ ಸವದಿ ಮಾತನಾಡಿದರು. ಸುಭಾಸ ಸೋನಕರ, ಬೀರಪ್ಪ ಅಲಾಸ, ಪ್ರಹ್ಲಾದ ಪೂಜಾರಿ, ಅಮಿತ ದೇಸಾಯಿ ಇತರರಿದ್ದರು. 
ಬೆಳಗಾವಿ

ಮಣ್ಣಿನ ಸಂಸ್ಕೃತಿ ಪ್ರತಿಬಿಂಬಿಸುವ ತೆರೆಬಂಡಿ

ಅಥಣಿ ಗ್ರಾಮೀಣ: ಗ್ರಾಮೀಣ ಸಂಸ್ಕೃತಿ, ಪರಂಪರೆ ಮತ್ತು ಕ್ರೀಡೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೋರಾಟ ಸಂಘ ಆಯೋಜಿಸಿರುವ ತೆರೆಬಂಡಿ ಸ್ಪರ್ಧೆ ಶ್ಲಾಘನೀಯ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ತೆರೆಬಂಡಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ತೆರೆಬಂಡಿ ಕೇವಲ ಸ್ಪರ್ಧೆಯಲ್ಲ. ರೈತರ ಬದುಕಿನೊಂದಿಗೆ ಬೆಸೆದುಕೊಂಡಿರುವ ಜಾನಪದ ಪರಂಪರೆಯ ಪ್ರತೀಕ. ಎತ್ತುಗಳ ಶಕ್ತಿ, ರೈತರ ಪರಿಶ್ರಮ ಮತ್ತು ಮಣ್ಣಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಎತ್ತುಗಳಿಗೆ ಹಿಂಸೆ ಕೊಡದೆ ಕ್ರೀಡಾ ಮನೋಭಾವ, ಶಿಸ್ತು, ಸ್ನೇಹ ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕು. ಪ್ರತಿವರ್ಷ ತೆರೆಬಂಡಿ ಸ್ಪರ್ಧೆ ಹಮ್ಮಿಕೊಳ್ಳಲು ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಮುಖಂಡ ಸುಭಾಸ ಸೋನಕರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಸ್ಪರ್ಧೆಗಳನ್ನು ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಸಂಘದ ಅಧ್ಯಕ್ಷ ಬೀರಪ್ಪ ಅಲಾಸ, ಜಿಪಂ ಮಾಜಿ ಸದಸ್ಯ ಪ್ರಹ್ಲಾದ ಪೂಜಾರಿ, ಪಿಕೆಪಿಎಸ್ ಅಧ್ಯಕ್ಷ ಅಣ್ಣಪ್ಪ ಖೋತ, ವಕೀಲ ಸತೀಶ ಪಾಟಣಕರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಾನಸಿಂಗ ಮಗರ, ಮುಖಂಡರಾದ ಅಮಿತ ದೇಸಾಯಿ, ಅನಿಲ ಮುಳಿಕ, ಅರ್ಜುನ ಪೂಜಾರಿ, ಶಂಕರ ಹಿರೇಕುರಬರ, ಬೀರಪ್ಪ ಯಕ್ಕಂಚಿ, ಮಹಾವೀರ ವೀರಗೌಡ, ಮಹಾದೇವ ಕುಳ್ಳೊಳ್ಳಿ, ಬೀರಪ್ಪ ಸನದಿ, ಮಹೇಶ ಯಲಡಗಿ, ಮಾಳಪ್ಪ ಅರಟಾಳ, ಸುರೇಶ ಪೂಜಾರಿ, ಧರೆಪ್ಪ ನಾವಿ ಇತರರಿದ್ದರು.
16-1