ಬೆಳಗಾವಿಯಲ್ಲಿ ಈಚೆಗೆ ಜರುಗಿದ ಸಮಾರಂಭದಲ್ಲಿ ಪ್ರಲ್ಹಾದ ಪಾಂಡವರಿಗೆ ಚರ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭೀಮರಾವ ಪವಾರ, ಅಣ್ಣಾಸಾಹೇಬ ರಾಯಮಾನೆ, ಡಾ.ಮೋಹನ ಉಳ್ಳಿಕಾಶಿ, ಸಂತೋಷ ಹೊಂಗಲ ಇತರರಿದ್ದರು. 
ಬೆಳಗಾವಿ

ಸಮರ್ಪಕ ಮಾರುಕಟ್ಟೆ ಇಂದಿನ ಅಗತ್ಯ

ಬೆಳಗಾವಿ: ಸ್ಪರ್ಧಾತ್ಮಕ ಯುಗದಲ್ಲಿ ಪಾದರಕ್ಷೆ ಹಾಗೂ ಚರ್ಮ ಉದ್ಯೋಗ ಅಭಿವೃದ್ಧಿಪಡಿಸಲು ನವೀನ ತಂತ್ರಜ್ಞಾನ, ಉತ್ತಮ ವಿನ್ಯಾಸ ಹಾಗೂ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಅತ್ಯಂತ ಅಗತ್ಯ ಎಂದು ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ ಅಧ್ಯಕ್ಷ ಭೀಮರಾವ ಪವಾರ ಹೇಳಿದರು.
ನಗರದ ಕನ್ನಡ ಭವನದಲ್ಲಿ ಈಚೆಗೆ ಪ್ರೋತ್ಸಾಹ ಫೌಂಡೇಷನ್ ಏರ್ಪಡಿಸಿದ್ದ ಸಮಗಾರ ಹರಳಯ್ಯ (ಚರ್ಮಕಾರ) ಸಮುದಾಯದ ಸಮಾವೇಶದಲ್ಲಿ ಮಾತನಾಡಿ, ಸರಿಯಾದ ಯೋಜನೆ, ಪರಿಶ್ರಮ ಹಾಗೂ ನವೀನ ತಂತ್ರಜ್ಞಾನ ಅಳವಡಿಸಿಕೊಂಡರೆ ಚರ್ಮ ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಅವಕಾಶ ಸೃಷ್ಟಿಸಬಹುದು ಎಂದರು.
ಚರ್ಮೋದ್ಯಮ ಕ್ಷೇತ್ರದಲ್ಲಿ ನೀಡಿದ ಮಹತ್ವದ ಸೇವೆ ಗುರುತಿಸಿ ಪ್ರಲ್ಹಾದ ಪಾಂಡವರಿಗೆ ಚರ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಪತ್ನಿ ತುಳಸಾಬಾಯಿ ಅವರನ್ನೂ ಸನ್ಮಾನಿಸಲಾಯಿತು.
ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ, ಪ್ರೊ.ಅಣ್ಣಾಸಾಹೇಬ ರಾಯಮಾನೆ, ಡಾ.ಮೋಹನ ಉಳ್ಳಿಕಾಶಿ, ಪೊಲೀಸ್ ಉಪ ಆಯುಕ್ತ ಸದಾಶಿವ ಕಟ್ಟಿಮನಿ, ಲೆದರ್ ಆರ್ಟಿಸನ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಅಧ್ಯಕ್ಷ ಸಂತೋಷ ಹೊಂಗಲ, ವಾಸುದೇವ ದೋಡಮನಿ, ಸಾಗರ ಕಿತ್ತೂರ, ಚಂದ್ರಕಾಂತ ಲೋಕರೆ, ಡಾ.ಶಿವಾನಂದ ದೊಡ್ಡಮನಿ, ಮಲ್ಲಿಕಾರ್ಜುನ ತಾಳಿಕೋಟಿ, ಶಂಕರ ಕಾಂಬಳೆ, ರೂಪಾಲಿ ಸಂತೋಷಕುಮಾರ, ರವಿ ಹೊಂಗಲ, ಡಾ.ಚಂದ್ರಕಾಂತ ವಾಘಮಾರೆ, ಆನಂದ ಸೌದತ್ತಿ, ಹೀರಾಲಾಲ್ ಚೌಹಾಣ, ಸಂಜೀವ ಲೋಕಾಪುರ,
ಜಿ.ಬಿ.ವಾಘಮಾರೆ, ಲತಾ ಮಾನೆ, ರೇಖಾ ದೊಡಮನಿ, ಸಂಗೀತಾ ಸಾಂಗಲಿ ಇತರರಿದ್ದರು. ಮಲ್ಲಿಕಾರ್ಜುನ ತಾಳಿಕೋಟಿ ನಿರೂಪಿಸಿದರು. ಸುರೇಶ ಸಾಂಗಲಿ ವಂದಿಸಿದರು.