ಅಂಬಿಗರ ಚೌಡಯ್ಯ 
ಬೆಳಗಾವಿ

ಅಂಬಿಗರ ಚೌಡಯ್ಯ, ಮಾಚಿದೇವರ ಜಯಂತ್ಯುತ್ಸವ

ಧರ್ಮರಾಜ ರಾಮನಗೌಡ ಪಾಟೀಲ
ಬೆಳಗಾವಿ: ಇಲ್ಲಿನ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜ.31ರಂದು ಬೆಳಗ್ಗೆ 11.30ಕ್ಕೆ ಜಿಪಂ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಾಲಿಕೆ ಆಶ್ರಯದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮ ಜರುಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾಗವಹಿಸಲಿದ್ದಾರೆ. ಸಾಹಿತಿ ನಾಗರಾಜ ಗಸ್ತಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಪಂ.ರಾಜಪ್ರಭು ಧೋತ್ರೆ ಹಾಗೂ ಸಂಗಡಿಗರಿಂದ ವಚನ ಸಂಗಿತ ಕಾರ್ಯಕ್ರಮ ನಡೆಯಲಿದೆ.
ಮಾಚಿದೇವರ ಜಯಂತ್ಯುತ್ಸವ: ಫೆಬ್ರವರಿ 1ರಂದು ಬೆಳಗ್ಗೆ 11ಗಂಟೆಗೆ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮ ಜರುಗಲಿದೆ.
ಬೆನನ್‌ಸ್ಮಿತ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀಕಾಂತ ಶಾನವಾಡ ಉಪನ್ಯಾಸ ನೀಡಲಿದ್ದಾರೆ. ದುಳಗನವಾಡಿ ಶ್ರೀಭರತ ಕಲಾಚಂದ್ರ ಹಾಗೂ ತಂಡದಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.